alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷದವನ ಜೊತೆ ಪರಾರಿಯಾಗಿದ್ಲು ಗೃಹಿಣಿ..!

ವಿಲಕ್ಷಣ ಪ್ರಕರಣವೊಂದರಲ್ಲಿ ಗೃಹಿಣಿಯೊಬ್ಬಳು ಸಂಸಾರ ತ್ಯಜಿಸಿ 17 ವರ್ಷದ ಬಾಲಕನ ಜೊತೆ ಪರಾರಿಯಾಗಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾಳೆ. ಬಾಲಕನನ್ನು ಲೈಂಗಿಕ ಶೋಷಣೆಗೊಳಪಡಿಸಿದ ಕಾರಣಕ್ಕೆ ಆಕೆಯ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೆಜಿಎಫ್ ಮೂಲದ ಮಹಿಳೆ ಎರಡು ವರ್ಷದ ಹಿಂದೆ ಉದ್ಯಮಿಯೋರ್ವನೊಂದಿಗೆ ವಿವಾಹವಾಗಿದ್ದು, ಅಕ್ಟೋಬರ್ 24 ರಂದು ಕಾಣೆಯಾಗಿದ್ದಳು. ಪತ್ನಿ ಕಾಣೆಯಾಗಿರುವ ಕುರಿತು ಉದ್ಯಮಿ ಅಂದೇ ದೂರು ದಾಖಲಿಸಿದ್ದ. ಮಾರನೇ ದಿನ ಬಾಲಕನೂ ಕಾಣೆಯಾಗಿದ್ದು, ಆತನ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಲು ಠಾಣೆಗೆ ಬಂದ ವೇಳೆ ಗೃಹಿಣಿ ಫೋಟೋ ನೋಡಿ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಗೃಹಿಣಿ ಮತ್ತು ಅಪ್ರಾಪ್ತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಲೈಂಗಿಕ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಆತನೊಂದಿಗೆ ಪರಾರಿಯಾಗಿದ್ದ ಗೃಹಿಣಿ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...