alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತನೊಂದಿಗೆ ಸೆಕ್ಸ್ ಗೆ ಬಲವಂತ, ದುಡುಕಿದ ಪತ್ನಿ

ಬೆಂಗಳೂರು: ಸ್ನೇಹಿತನೊಂದಿಗೆ ಲೈಂಗಿಕ ಸಂಪರ್ಕ ನಡೆಸಲು ಪತಿ ಬಲವಂತ ಮಾಡಿದ್ದರಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಂಗೇರಿ ಸ್ಯಾಟ್ ಲೈಟ್ ಖಾಸಗಿ ಶಾಲೆಯೊಂದರ ಶಿಕ್ಷಕಿ(24) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಬಳ್ಳಾಪುರ ಜಿಲ್ಲೆ ಬಸವನಹಳ್ಳಿಯ ಅಶೋಕ್ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದಾನೆ.

7 ತಿಂಗಳ ಹಿಂದೆ ಅಶೋಕ್ ನನ್ನು ಶಿಕ್ಷಕಿ ಮದುವೆಯಾಗಿದ್ದರು. ಮದುವೆಯ ಬಳಿಕ ವಾಚ್ ಮನ್ ಕೆಲಸವನ್ನು ಬಿಟ್ಟಿದ್ದ ಅಶೋಕ್ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಸ್ನೇಹಿತನೊಂದಿಗೆ ಸೆಕ್ಸ್ ಗೆ ಒತ್ತಾಯ ಮಾಡುತ್ತಿದ್ದ. ಇದರಿಂದ ನೊಂದ ಶಿಕ್ಷಕಿ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದು, ದಂಪತಿಯನ್ನು ಕರೆಸಿ ಸಮಾಲೋಚನೆ ನಡೆಸಲಾಗಿದೆ.

ಇದಾದ ಬಳಿಕ ಶಿಕ್ಷಕಿಗೆ ಅಶೋಕ್ ಹೆಚ್ಚಿನ ಕಿರುಕುಳ ನೀಡಿದ್ದು, ನಿದ್ದೆ ಮಾತ್ರೆ ಸೇವಿಸಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...