alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯೊಂದಿಗೆ ಅಮಾನುಷವಾಗಿ ವರ್ತಿಸಿದ ಕಿರಾತಕರು

ben-rape

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದ್ದು, ತಾಯಿ, ಮಗಳನ್ನು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ.

ಇಷ್ಟಕ್ಕೆ ನಿಲ್ಲದ ವಿಕೃತರು ಯುವತಿಯ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಟ್ಟಹಾಸ ಮೆರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರು ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಪೊಲೀಸ್ ಠಾಣೆಯ ವ್ಯಾಪ್ತಿಯ ಯುವತಿಯನ್ನು ಬಂಧಿತ ಆರೋಪಿಗಳ ಕುಟುಂಬದ ಯುವಕ ಪ್ರೀತಿಸಿದ್ದು, ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.

ಯುವಕನಿಗೆ ಸಂತ್ರಸ್ಥ ಯುವತಿ ಹಾಗೂ ಆಕೆಯ ತಾಯಿ ಆಶ್ರಯ ನೀಡಿದ್ದು, ತನ್ನ ಮಗನ ಪ್ರೀತಿಗೆ ಯುವತಿಯೇ ಕಾರಣ ಎಂದು ಭಾವಿಸಿದ ಯುವಕನ ಕುಟುಂಬದವರು ಜನವರಿ 15 ರಂದು ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ.

ಯುವಕನಿಗೆ ಆಶ್ರಯ ನೀಡಿದ್ದ ಯುವತಿ ಹಾಗೂ ಆಕೆಯ ತಾಯಿಯನ್ನು ಅಪಹರಿಸಿ, ಕೆ.ಆರ್.ಪುರಂ ಫ್ಯಾಕ್ಟರಿಯೊಂದರ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ತಾಯಿ, ಮಗಳನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ್ದಲ್ಲದೇ, ಯುವತಿಯ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಟ್ಟಹಾಸ ಮೆರೆದಿದ್ದಾರೆ.

ಯುವತಿ ಹಾಗೂ ಆಕೆಯ ತಾಯಿ ನಂದಿನಿ ಲೇ ಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷಾ, ಯಾಸ್ಮೀನ್, ಜಬೀ, ನಿಜಾಮುನ್ನೀಸಾ, ಇಮ್ರಾನ್, ಇಂದಿರಾ ಎಂಬುವವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...