alex Certify
ಕನ್ನಡ ದುನಿಯಾ       Mobile App
       

Kannada Duniya

ಜೊತೆಗೆ ಮಲಗದ ಪತಿ, ತಪ್ಪು ದಾರಿ ತುಳಿದ ಪತ್ನಿ

ಬೆಂಗಳೂರು: ‘ತನ್ನ ಪತಿ ಕಳೆದ 4 ವರ್ಷಗಳಿಂದ ಜೊತೆಗೆ ಮಲಗುತ್ತಿರಲಿಲ್ಲ. ಇದರಿಂದ ಬೇಸತ್ತು ಬೇರೆಯವನೊಂದಿಗೆ ಸಂಬಂಧ ಬೆಳೆಸಿದೆ. ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾಗಬಹುದೆಂದು ಆತನನ್ನು ಕೊಲೆ ಮಾಡಿಸಿದೆ’.

ಹೀಗೆಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಮಹಿಳೆಯೊಬ್ಬಳು ಹೇಳಿದ್ದಾಳೆ. ರಾಜಗೋಪಾಲ ನಗರ ಠಾಣೆ ಪೊಲೀಸರು ಅಕ್ಟೋಬರ್ 12 ರಂದು ನಡೆದಿದ್ದ 36 ವರ್ಷದ ಮಧುಸೂದನ್ ಎಂಬುವವರ ಕೊಲೆ ಪ್ರಕರಣದ ತನಿಖೆ ಕೈಗೊಂಡ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮಧುಸೂದನ್ ಪತ್ನಿ, ಆಕೆಯ ಪ್ರಿಯಕರ ಪ್ರದೀಪ್ ಮತ್ತು ಪ್ರದೀಪ್ ಸ್ನೇಹಿತರಾದ ಹರಿಪ್ರಸಾದ್ ಮತ್ತು ರಂಜಿತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮಧುಸೂದನ್ ಲೈಂಗಿಕ ಕ್ರಿಯೆಗೆ ಸಹಕರಿಸುತ್ತಿರಲಿಲ್ಲವಾದ್ದರಿಂದ ಆತನ ಪತ್ನಿ ತಪ್ಪು ದಾರಿ ತುಳಿದು ಪ್ರದೀಪ್ ಜೊತೆ ಸಂಬಂಧ ಬೆಳೆಸಿದ್ದಾಳೆ. ತಮ್ಮ ಅಕ್ರಮ ಸಂಬಂಧಕ್ಕೆ ಮಧುಸೂದನ್ ಅಡ್ಡಿಯಾಗಬಹುದೆಂದು ಭಾವಿಸಿ ಕೊಲೆ ಮಾಡಲು ತೀರ್ಮಾನಿಸಿದ್ದಾರೆ.

ಅಕ್ಟೋಬರ್ 12 ರಂದು ಮದ್ಯ ಕುಡಿಸಿ ಕತ್ತು ಹಿಸುಕಿ ಮಧುಸೂದನ್ ನನ್ನು ಕೊಲೆ ಮಾಡಿದ ಪ್ರದೀಪ್ ಮತ್ತು ಆತನ ಸ್ನೇಹಿತರು ರಾಜಕಾಲುವೆಗೆ ಮೃತದೇಹ ಎಸೆದಿದ್ದಾರೆ. ಪತ್ನಿ ನೀಡಿದ ನಾಪತ್ತೆ ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರಿಗೆ ಆಕೆಯ ಮೇಲೆಯೇ ಅನುಮಾನ ಬಂದಿದೆ. ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ,

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...