alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತಾ ಗೆಳೆಯನ ಪತ್ನಿಯೊಂದಿಗಿನ ಅಕ್ರಮ ಸಂಬಂಧ…?

ಬೆಂಗಳೂರು: ರಾಜಧಾನಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಪರಿಚಿತನೇ ಹತ್ಯೆ ಮಾಡಿದ್ದಾನೆ.

ವಿವೇಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸೈಯದ್ ಹುಸೇನ್ ಕೊಲೆಯಾದ ವ್ಯಕ್ತಿ. ಶಿವಶಂಕರ್ ಎಂಬುವವನ ಪತ್ನಿಯೊಂದಿಗೆ ಹೆಚ್ಚಾಗಿ ಮಾತನಾಡುತ್ತಿದ್ದ ಹುಸೇನ್, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಇಷ್ಟಕ್ಕೆ ಅನುಮಾನಗೊಂಡ ಶಿವಶಂಕರ್, ಹುಸೇನ್ ನನ್ನು ಸಮೀಪದ ಮೈದಾನಕ್ಕೆ ಕರೆದೊಯ್ದು ಹೊಟ್ಟೆ, ಎದೆಗೆ ಗುದ್ದಿದ್ದಾನೆ.

ಇದರಿಂದಾಗಿ ದೇಹದ ಒಳಭಾಗದಲ್ಲಿ ಪೆಟ್ಟು ಬಿದ್ದು ಅಸ್ವಸ್ಥಗೊಂಡ ಹುಸೇನ್ ನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಠಾಣೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...