alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ಬೆಂಗಳೂರು: ಕಿರಾತಕನೊಬ್ಬ ಗೋಡೆಗೆ ತಲೆ ಗುದ್ದಿಸಿ ತಾಯಿಯನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರು ಆಡುಗೋಡಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

80 ವರ್ಷದ ಲಕ್ಷ್ಮಿ ಹತ್ಯೆಗೀಡಾದವರು. ಆಕೆಯ ಪುತ್ರ ಸೆಲ್ವರಾಜ್ ಮದ್ಯ ಸೇವಿಸಲು ಹಣ ಕೊಡದ ಕಾರಣಕ್ಕೆ ತಾಯಿಯನ್ನು ಕೊಲೆ ಮಾಡಿದ್ದಾನೆ.

ಆಟೋ ಚಾಲಕನಾಗಿದ್ದ ಸೆಲ್ವರಾಜ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಮತ್ತೆ ಮದ್ಯಸೇವಿಸಲು ಹಣ ಕೊಡುವಂತೆ ತಾಯಿಯನ್ನು ಪೀಡಿಸಿದ್ದಾನೆ. ಇದರಿಂದ ಜಗಳವಾಗಿದ್ದು, ಸಿಟ್ಟಿನಲ್ಲಿ ತಾಯಿ ತಲೆಯನ್ನು ಗೋಡೆಗೆ ಗುದ್ದಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಆಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...