alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಯನ್ನೇ ಬಡಿದು ಕೊಂದ ದುಷ್ಕರ್ಮಿಗಳು

ben-murd-sis

ಬೆಂಗಳೂರು: ಅಕ್ಕಂದಿರಿಂದಲೇ ತಂಗಿ ಕೊಲೆಗೀಡಾದ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿಲ್ವೇಪುರದಲ್ಲಿ ವಾಸವಾಗಿದ್ದ 24 ವರ್ಷದ ಜ್ಯೋತಿ ಕೊಲೆಗೀಡಾದವರು. ಆಕೆಯ ತಂದೆಯ ಸಹೋದರನ(ದೊಡ್ಡಪ್ಪನ) ಮಕ್ಕಳು ಜ್ಯೋತಿಯನ್ನು ಬಡಿಗೆಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ.

ತಡೆಯಲು ಬಂದ ಜ್ಯೋತಿ ಸಹೋದರನಿಗೂ ಚಾಕುವಿನಿಂದ ಇರಿಯಲಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ತಿ ವಿಚಾರವಾಗಿ ಸಹೋದರಿಯರ ನಡುವೆ ನಡೆದ ಜಗಳವೇ ಕೊಲೆಗೆ ಕಾರಣವೆನ್ನಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೋಲದೇವನಹಳ್ಳಿ ಠಾಣೆ ಪೊಲಿಸರು, ಮೂವರನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...