alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಗಳ ಜನನಾಂಗಕ್ಕೆ ನೂಲು ಕಟ್ಟಿ ಹಿಂಸಿಸಿದ ಬಾಲಕರು

ವೇದ ಪಾಠಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಬಾಲಕರು, ಇನ್ನಿಬ್ಬರು ಸಹಪಾಠಿ ಬಾಲಕರ ಜನನಾಂಗಗಳಿಗೆ ನೂಲು ಸುತ್ತುವ ಮೂಲಕ ರಾಗಿಂಗ್ ನಡೆಸಿರುವ ಪ್ರಕರಣ ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೇದಪಾಠಶಾಲೆಯ ನಿರ್ದೇಶಕ ಸುಧೀರ್ ಕುಲಕರ್ಣಿ(42) ಅವರನ್ನು ಬಂಧಿಸಿದ್ದು, 10 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಆಗಸ್ಟ್ 26 ಮತ್ತು ಸೆಪ್ಟೆಂಬರ್ 12ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಂತ್ರಸ್ತ ಬಾಲಕರು ತಮಗಾದ ದೌರ್ಜನ್ಯವನ್ನು ವೇದಪಾಠಶಾಲೆಯ ನಿರ್ದೇಶಕರ ಗಮನಕ್ಕೆ ತಂದಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದರು ಎಂದು ಸಂತ್ರಸ್ತ ಬಾಲಕರ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಹಪಾಠಿಗಳನ್ನು ಬೇಕಾಬಿಟ್ಟಿಯಾಗಿ ಗೋಳು ಹೊಯ್ದುಕೊಳ್ಳುತ್ತಿದ್ದ ಆರೋಪಿ ಬಾಲಕರು ಸಹಪಾಠಿಗಳ ಜನನಾಂಗಕ್ಕೆ ನೂಲನ್ನು ಬಿಗಿಯಾಗಿ ಸುತ್ತಿ ಹಿಂಸೆ ನೀಡಿದ್ದರು ಎಂದು ಹೇಳಲಾಗಿದೆ.

ಪೊಲೀಸರು ಐಪಿಸಿ ಸೆಕ್ಷನ್ 307 ಮತ್ತು 326 ಅನ್ವಯ ದೂರು ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಕಾನೂನು ಪ್ರಕಾರ ನೋಂದಣಿಯಾಗಿರದ ಈ ವೇದಪಾಠ ಶಾಲೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...