alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಭೇಟಿ ಸಾಧ್ಯವಾಗದ್ದಕ್ಕೆ ನೊಂದ ಪತಿ ಮಾಡಿದ್ದೇನು?

ತನ್ನೊಂದಿಗೆ ಜಗಳವಾಡಿದ ಪತ್ನಿ ಕೋಪಗೊಂಡು ಮಗನೊಂದಿಗೆ ತವರು ಮನೆ ಸೇರಿದ್ದು, ಆಕೆಯ ಮನವೊಲಿಸಿ ಕರೆದುಕೊಂಡು ಬರಲು ಹೋಗಿದ್ದ ಪತಿ ಆಕೆ ಕಡೆ ಪಕ್ಷ ಭೇಟಿಯಾಗಲೂ ಒಪ್ಪದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೀರತ್ ನಲ್ಲಿ ಈ ಘಟನೆ ನಡೆದಿದ್ದು, 38 ವರ್ಷದ ಮಹಮ್ಮದ್ ನದೀಂ ಎಂಬಾತನ ವಿವಾಹ ಲಿಸಾಡಿ ಗೇಟ್ ಏರಿಯಾ ನಿವಾಸಿ ಮಹಿಳೆಯೊಂದಿಗೆ 12 ವರ್ಷಗಳ ಹಿಂದೆ ನೆರವೇರಿತ್ತು. ದಂಪತಿಗಳಿಗೆ ಓರ್ವ ಮಗನೂ ಇದ್ದು, ಕೆಲ ದಿನಗಳ ಹಿಂದೆ ಪತಿಯೊಂದಿಗೆ ಜಗಳವಾಡಿದ ಮಹಿಳೆ ತವರು ಮನೆ ಸೇರಿದ್ದಳು.

ಪತ್ನಿ ಹಾಗೂ ಮಗನನ್ನು ಕರೆ ತರಲು ಕಳೆದ ವಾರ ನದೀಂ ಮಾವನ ಮನೆಗೆ ತೆರಳಿದ್ದ ವೇಳೆ ಆತನ ಮೇಲೆ ಹಲ್ಲೆ ನಡೆಸಿದ್ದ ಪತ್ನಿ ಕುಟುಂಬಸ್ಥರು ಮಗಳನ್ನು ಕಳುಹಿಸುವುದಿಲ್ಲವೆಂದು ಹೇಳಿದ್ದರೆನ್ನಲಾಗಿದೆ. ಭಾನುವಾರದಂದು ನದೀಂ ಪತ್ನಿ, ಮಗನನ್ನು ಕರೆ ತರಲು ಮತ್ತೊಮ್ಮೆ ಯತ್ನಿಸಿದ್ದು, ಯಾವುದೇ ಕಾರಣಕ್ಕೂ ವಾಪಾಸ್ ಬರುವುದಿಲ್ಲವೆಂದು ಪತ್ನಿ ಹೇಳಿದ ಕಾರಣ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...