alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ತಲಾಖ್ ನೀಡ್ದ….ಮಾವ ಜೊತೆಗಿರುವ ಆಫರ್ ನೀಡ್ದ..!

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾಶಿರಾಮ್ ಕಾಲೋನಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೀಡಿತ ಮಹಿಳೆ ಪತಿ ಮೊದಲ ಮದುವೆ ಸತ್ಯ ಮುಚ್ಚಿಟ್ಟು ಈಕೆಯನ್ನು ಎರಡನೇ ಮದುವೆಯಾಗಿದ್ದನಂತೆ. ಗರ್ಭವತಿಯಾಗ್ತಿದ್ದಂತೆ ಮಹಿಳೆಗೆ ಹೊಡೆದು ತಲಾಖ್ ನೀಡಿದ್ದನಂತೆ.

ಮಗುವಾದ್ಮೇಲೆ ಗಂಡನ ಮನೆಗೆ ವಾಪಸ್ ಬಂದ ಪತ್ನಿಯನ್ನು ಪತಿ ಸ್ವೀಕರಿಸಲಿಲ್ಲವಂತೆ. ಎಷ್ಟು ಬೇಡಿಕೊಂಡ್ರು ಪತಿ ಮನೆಯಿಂದ ಹೊರ ಹಾಕುವ ನಿರ್ಧಾರ ಮಾಡಿದ್ನಂತೆ. ಇದನ್ನು ಪೀಡಿತೆ, ಪತಿ ತಂದೆಗೆ ಹೇಳಿದ್ದಾಳೆ. ಮಗನಿಗೆ ಬುದ್ದಿ ಹೇಳಿ ಸಂಸಾರ ಒಂದು ಮಾಡುವ ಬದಲು ಮಾವ ತನ್ನ ಜೊತೆಗೆ ಬಾ ಎಂದಿದ್ದಾನಂತೆ.

ಮಗ ನಿನ್ನನ್ನು ಒಪ್ಪಿಕೊಳ್ಳಲಿಲ್ಲ. ನನ್ನ ಜೊತೆಗಿರಬಹುದೆಂದು ಮಾವ ಹೇಳಿದ್ದಾನಂತೆ. ಸಂಘಟನೆ ಮೊರೆ ಹೋದ ಮಹಿಳೆ ಎಲ್ಲ ವಿಷ್ಯ ತಿಳಿಸಿದ್ದಾಳೆ. ಸಂಘಟನೆ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...