alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚು ಪ್ರೀತಿಗೆ ಅಪ್ರಾಪ್ತೆಯನ್ನು ಜೀವಂತ ಸುಟ್ಟ ಪಾಪಿ

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೀತಿ ಹುಚ್ಚಿಗೆ ಬಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತೆಗೆ ಬೆಂಕಿ ಹಚ್ಚಿ ಜೀವಂತ ಸುಟ್ಟಿದ್ದಾನೆ. ಬಾಲಕಿ ಬೇರೆ ಹುಡುಗನ ಜೊತೆ ಮಾತನಾಡಿದ್ದೇ ಈ ಘಟನೆಗೆ ಕಾರಣವಾಗಿದೆ.

ಬಾರಾಬಂಕಿಯ ಗ್ರಾಮವೊಂದರ ಅಮಿತ್ ಎಂಬಾತ ಅಪ್ರಾಪ್ತೆ ತಾರಾವತಿಯನ್ನು ಪ್ರೀತಿ ಮಾಡ್ತಿದ್ದ. ಅಮಿತ್ ನನ್ನು ತಾರಾವತಿ ಪ್ರೀತಿ ಮಾಡ್ತಿರಲಿಲ್ಲ. ಈ ಮಧ್ಯೆ ತಾರಾವತಿ ಬೇರೆ ಹುಡುಗರ ಜೊತೆ ಮಾತನಾಡುವುದನ್ನು ಅಮಿತ್ ನೋಡಿದ್ದಾನೆ. ಕೋಪಗೊಂಡ ಅಮಿತ್, ತಾರಾವತಿಗೆ ಬುದ್ದಿಕಲಿಸಲು ಮುಂದಾಗಿದ್ದಾನೆ.

ಯಾರು ಇಲ್ಲದ ವೇಳೆ ಮನೆಗೆ ಬಂದ ಅಮಿತ್, ತಾರಾವತಿಗೆ ಹೊಡೆದಿದ್ದಾನೆ. ನಂತ್ರ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ, ಪರಾರಿಯಾಗಿದ್ದಾನೆ. ತಾರಾವತಿ ಕೂಗು ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದಾರೆ. ತಾರಾವತಿ ಈ ವೇಳೆ ಶೇಕಡಾ 80ರಷ್ಟು ಸುಟ್ಟು ಹೋಗಿದ್ದಳಂತೆ. ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಸಾಯುವ ಮುನ್ನ ತಾರಾವತಿ ತಂದೆಗೆ ವಿಷ್ಯ ತಿಳಿಸಿದ್ದಾಳೆ. ಅಮಿತ್ ಹಾಗೂ ಆತನ ತಾಯಿ ತನಗೆ ಬೆಂಕಿ ಹಚ್ಚಿದ್ದಾರೆಂದು ತಾರಾಮತಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...