alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಪರಿಚಿತನಾದವನಿಂದ ಮಹಾಮೋಸ

fraud

ಮುಂಬೈನಲ್ಲಿ 72 ವರ್ಷದ ವೃದ್ಧನೊಬ್ಬ ಆನ್ ಲೈನ್ ನಲ್ಲಿ 2 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ. ಬಾಂದ್ರಾ ನಿವಾಸಿಯಾಗಿದ್ದ ಈತನಿಗೆ ಫೇಸ್ಬುಕ್ ಮೂಲಕ ಅಮೆರಿಕದವ ಎಂದು ಹೇಳಿ ಸ್ನೇಹ ಸಂಪಾದಿಸಿದವನೊಬ್ಬ ವಂಚಿಸಿದ್ದಾನೆ. ಅಫ್ಘಾನಿಸ್ತಾನ ಹೂಡಿಕೆ ಯೋಜನೆ ಹೆಸರಲ್ಲಿ 2 ಕೋಟಿ ರೂಪಾಯಿ ಪಂಗನಾಮ ಹಾಕಲಾಗಿದೆ.

ವೃದ್ಧನಿಂದ ಹಣ ತೆಗೆದುಕೊಂಡು ಅದನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಲಾಗಿತ್ತು. ಬ್ಯಾಂಕ್ ಎಕ್ಸಿಕ್ಯೂಟಿವ್ ಅಂತಾ ಹೇಳಿಕೊಂಡು ಮಹಿಳೆಯೊಬ್ಳು ಕೂಡ ಕರೆ ಮಾಡಿದ್ಲು. ಅದನ್ನು ನಂಬಿದ ವೃದ್ಧ ವಂಚಕರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಕೂಡಲೇ ವಂಚಕರು ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ವೃದ್ಧನಿಗೆ ನಕಲಿ ಡೆಬಿಟ್ ಕಾರ್ಡ್ ಕಳಿಸಿಕೊಟ್ಟಿದ್ದಾರೆ.

ಈ ಸಂಬಂಧ ಮಂಗಲ್ ಬಿಶ್ನೋಯ್, ಅಮಿತ್ ಅಗರ್ವಾಲ್, ಸಮೀರ್ ಮರ್ಚಂಟ್, ಜಿತೇಂದ್ರ ರಾಥೋಡ್, ಪರೇಶ್ ನಿಸ್ಬಂದ್ ಎಂಬ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧನಿಂದ ತಮ್ಮ ಅಕೌಂಟ್ ಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದ ಖದೀಮರು ನಂತರ ಅದನ್ನು ಬೇರೆ ಅಕೌಂಟ್ ಗೆ ವರ್ಗಾಯಿಸುತ್ತಿದ್ರು.

ಇದೊಂದು ನೈಜೀರಿಯಾದ ಗ್ಯಾಂಗ್. ಒಟ್ಟು 108 ನಕಲಿ ಪ್ಯಾನ್ ಕಾರ್ಡ್ ಬಳಸಿ ಇವರು ಮಹಾಮೋಸ ಮಾಡಿದ್ದಾರೆ. ನಕಲಿ ದಾಖಲೆ ಬಳಸಿ ಮುಂಬೈ ಮತ್ತು ದೆಹಲಿಯಲ್ಲಿ ಹಲವು ನಕಲಿ ಬ್ಯಾಂಕ್ ಖಾತೆ ತೆರೆದಿದ್ದರು. ಒಟ್ಟು 108 ಖಾತೆಗಳಲ್ಲಿ 1 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಕೂಡ ಇತ್ತು. ಅದನ್ನು ಪೊಲೀಸರು ಜಫ್ತಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...