alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರದ ನಂತ್ರ ಮಹಿಳೆಯನ್ನು ನಿರ್ವಸ್ತ್ರಗೊಳಿಸಿ ಊರು ಸುತ್ತಿಸಿದ್ರು….

ಉತ್ತರ ಪ್ರದೇಶದ ಹಮೀರ್ಪುರದಲ್ಲಿ ಅಮಾನವೀಯ ಘಟನೆ ನಡೆದಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪಾಪಿಗಳು ನಿರ್ವಸ್ತ್ರಗೊಳಿಸಿ ಮಹಿಳೆ ಮೆರವಣಿಗೆ ಮಾಡಿದ್ದಾರೆ. ಇಷ್ಟರ ನಂತ್ರವೂ ತೃಪ್ತರಾಗದ ಗೂಂಡಾಗಳು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

ಗ್ರಾಮದಲ್ಲಿ ಮಹಿಳೆ ಕುಟುಂಬ ಹಾಗೂ ಗೂಂಡಾಗಿರಿ ಗುಂಪಿನ ಮಧ್ಯೆ ವಿವಾದ ನಡೆಯುತ್ತಿತ್ತು. ಭಾನುವಾರ ಮಹಿಳೆ ಪತಿ ಬೇರೆ ಊರಿಗೆ ತೆರಳಿದ್ದ. ಈ ವೇಳೆ ಮನೆಗೆ ನುಗ್ಗಿದ ನಾಲ್ವರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತ್ರ ಮಹಿಳೆಯನ್ನು ನಿರ್ವಸ್ತ್ರಗೊಳಿಸಿ ಊರು ಸುತ್ತಿಸಿದ್ದಾರೆ. ಆಮೇಲೆ ಥಳಿಸಿದ್ದಾರೆ. ಇದೆಲ್ಲವನ್ನೂ ಗ್ರಾಮಸ್ಥರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ಎನ್ನಲಾಗಿದೆ.

ಸ್ಥಳದಲ್ಲಿದ್ದ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆಸುತ್ತಿರುವ ಪೊಲೀಸರು ಮಹಿಳೆ ಮೇಲೆ ಹಲ್ಲೆ ಯತ್ನವೆಂದಷ್ಟೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಎಸ್ಪಿಗೆ ಪೀಡಿತ ಕುಟುಂಬ ದೂರು ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...