alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಕಾಸ್ತ್ರಗಳಿಂದ ಥಳಿಸಿ ಸ್ವಾಮೀಜಿ ಪುತ್ರನ ಹತ್ಯೆ

ಬಾಗಲಕೋಟೆ: ಮಾರಕಾರಸ್ತ್ರಗಳಿಂದ ಥಳಿಸಿ ಸ್ವಾಮೀಜಿ ಪುತ್ರನನ್ನು ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

32 ವರ್ಷದ ಚಿಕ್ಕಯ್ಯ ಮಠದ ಮೃತಪಟ್ಟವರು. ಬಸವಗೋಪಾಲ ನೀಲಮಾಣಿಕ್ಯ ಮಠದ ದಾನೇಶ್ವರ ಸ್ವಾಮೀಜಿ ಮೊದಲ ಪತ್ನಿಯ ಪುತ್ರರಾಗಿರುವ ಚಿಕ್ಕಯ್ಯ ಮಠದ ಅವರನ್ನು ವಾಹನವೊಂದರಲ್ಲಿ ಬಂದಿದ್ದ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದೆ.

ಮಠದ ಆಸ್ತಿ ವಿಚಾರವಾಗಿ ಈ ಹತ್ಯೆ ನಡೆದಿರಬಹುದೆಂದು ಶಂಕಿಸಲಾಗಿದೆ. 2 ವರ್ಷಗಳ ಹಿಂದೆಯೂ ಚಿಕ್ಕಯ್ಯ ಮಠದ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಲಾಗಿತ್ತು.

ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...