alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆ ಮಾಡಿ ಅಮಾಯಕನನ್ನು ಹತ್ಯೆ ಮಾಡಿದ್ರು ಪಾಪಿಗಳು

ದೆಹಲಿಯ ಮಹಿಪಾಲಪುರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗುರುಗ್ರಾಮ್ ನ ಮನೇಸರ್ ನಲ್ಲಿ ಕೆಲಸ ಮಾಡುವ ಸುನೀಲ್ ಕುಮಾರ್ ಭಟ್ ಅಲಿಯಾಸ್ ಸುಭಾಷ್ ಮೃತದೇಹ ಕಾಡಿನ ಮಧ್ಯೆ ಸಿಕ್ಕಿದೆ.

27 ವರ್ಷದ ಸುಭಾಷ್ ಡೆನಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡ್ತಿದ್ದ. ಸಹೋದರನ ಮಗನ ನಾಮಕರಣಕ್ಕಾಗಿ  ಗುರುಗ್ರಾಮ್ ನ ಹರಿದ್ವಾರಕ್ಕೆ ಹೊರಟಿದ್ದ. ಗುರುಗ್ರಾಮ್ ಬಸ್ ನಿಲ್ದಾಣದಲ್ಲಿ ಆಟೋ ಟ್ಯಾಕ್ಸಿ ಏರಿದ್ದಾನೆ. ಆಟೋದಲ್ಲಿ ಈ ಹಿಂದೆಯೇ ಎರಡು ಮಂದಿ ಇದ್ದರು ಎನ್ನಲಾಗಿದೆ.

ರಾತ್ರಿ 8.30ರ ಸುಮಾರಿಗೆ ಸುಭಾಷ್ ಪತ್ನಿಗೆ ಕರೆ ಮಾಡಿದ್ದಾನೆ. 4 ತಿಂಗಳ ಮಗುವಿನ ಆರೋಗ್ಯ ವಿಚಾರಿಸಿದ್ದಾನೆ. ನಂತ್ರ [HR29SB5524] ನಂಬರ್ ನೋಡು ಎಂದು ಸುಭಾಷ್ ಫೋನ್ ನಿಂದ ಮೆಸ್ಸೇಜ್ ಬಂದಿದೆ. ಆ ನಂತ್ರ ಸುಭಾಷ್ ಸಂಪರ್ಕಕ್ಕೆ ಸಿಕ್ಕಿಲ್ಲ.

ರಾತ್ರಿ ಪೂರ್ತಿ ಆರೋಪಿಗಳು ವಿವಿಧ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದಾರೆ. ಒಂದು ಕಡೆ 10 ಸಾವಿರ ಇನ್ನೊಂದು ಕಡೆ 15 ಹೀಗೆ ಬೇರೆ ಬೇರೆ ಕಡೆ ಹಣ ಡ್ರಾ ಮಾಡಿದ್ದಾರೆ. ನಂತ್ರ ಶುಕ್ರವಾರ ಬೆಳಿಗ್ಗೆ ಕೂಡ 3 ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದಾರೆ. ರಾತ್ರಿಯಿಡಿ ಸುಭಾಷ್ ಸಂಪರ್ಕಕ್ಕೆ ಸಿಗದ ಕಾರಣ ಮನೆಯವರು ದೂರು ದಾಖಲಿಸಿದ್ದಾರೆ. ಜಾಡು ಹಿಡಿದು ಹೋದ ಪೊಲೀಸರಿಗೆ ಸುಭಾಷ್ ಶವ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...