alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಬರ್ತಿದ್ದ ಪರ ಪುರುಷರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಬಾಲಕನಿಗೆ ಇಂಥ ಶಿಕ್ಷೆ

ಬಿಹಾರದ ನಳಂದ ಜಿಲ್ಲೆಯಲ್ಲಿ ಮಹಿಳೆ ವಿರುದ್ಧ ಕೊಲೆ ಯತ್ನದ ಆರೋಪವೊಂದು ಕೇಳಿ ಬಂದಿದೆ. ಮಹಿಳೆ 11 ವರ್ಷದ ಸೋದರಳಿಯನನ್ನು ಹತ್ಯೆ ಮಾಡಲು ಯತ್ನಿಸಿದ್ದಳು ಎನ್ನಲಾಗಿದೆ. ಮಹಿಳೆಗೆ ಅಕ್ರಮ ಸಂಬಂಧವಿತ್ತು. ಇದನ್ನು ಸೋದರಳಿಯ ವಿರೋಧಿಸಿದ್ದ. ಇದೇ ಕೊಲೆ ಯತ್ನಕ್ಕೆ ಕಾರಣವಾಗಿದೆ.

ಮಹಿಳೆ 11 ವರ್ಷದ ಬಾಲಕನ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾಳೆ. ಬಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಹಿಳೆಗೆ ಅನೇಕರ ಜೊತೆ ಅಕ್ರಮ ಸಂಬಂಧವಿತ್ತಂತೆ. ಇದನ್ನು ಬಾಲಕಿ ತಂದೆ ಕೂಡ ವಿರೋಧಿಸಿದ್ದನಂತೆ.

ಘಟನೆ ನಡೆದ ದಿನ ಬಾಲಕಿ ತಂದೆ ಅತ್ತಿಗೆ ವಿರುದ್ಧ ಜಗಳವಾಡಿದ್ದನಂತೆ. ಪದೇ ಪದೇ ಬೇರೆ ಬೇರೆ ಪುರುಷರು ಮನೆಗೆ ಬರೋದು ಸರಿಯಲ್ಲ ಎಂದಿದ್ದನಂತೆ. ಇದೇ ವಿಚಾರಕ್ಕೆ ಗಲಾಟೆ ನಡೆದಿತ್ತಂತೆ. ಬಾಲಕ ಕೂಡ ತಂದೆ ಪರ ಮಾತನಾಡಿದ್ದನಂತೆ. ನಂತ್ರ ಬಾಲಕನ ತಂದೆ ಹೊರಗೆ ಹೋಗಿದ್ದಾನೆ. ಈ ಸಮಯ ನೋಡಿ ಬಾಲಕನ ಕತ್ತು ಕೊಯ್ದಿದ್ದಾಳೆ ಮಹಿಳೆ. ಬಾಲಕನ ಸಹೋದರ ಇದನ್ನು ನೋಡಿ ಮನೆಯ ಉಳಿದ ಸದಸ್ಯರಿಗೆ ಹೇಳಿದ್ದಾನೆ. ಘಟನೆ ನಂತ್ರ ಓಡಿ ಹೋಗ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...