alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪೊಲೀಸ್ ಅಧಿಕಾರಿಗಳ ಫೋನ್ ನಲ್ಲಿನ ಸಲ್ಲಾಪ

cop

ಓಡಿಶಾದ ಭುವನೇಶ್ವರದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಲೈಂಗಿಕ ಕಾರ್ಯಕರ್ತೆಯರ ನಡುವಣ ಸಂಭಾಷಣೆಯ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಅದರ ಬೆನ್ನಲ್ಲೇ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ, ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿರೋದು ಅನುಮಾನ ಮೂಡಿಸಿದೆ.

ಇಬ್ಬರು ಪೊಲೀಸ್ ಅಧಿಕಾರಿಗಳು, ಯುವತಿಯರ ಜೊತೆಗೆ ನಡೆಸಿದ ಪ್ರತ್ಯೇಕ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ”ನನ್ನ ಜೊತೆಗೆ ಬಾ, ನಿನ್ನ ಬದುಕನ್ನೇ ಬದಲಾಯಿಸ್ತೀನಿ” ಅಂತೆಲ್ಲಾ ಪೊಲೀಸ್ ಅಧಿಕಾರಿಯೊಬ್ಬ ಯುವತಿಯ ಜೊತೆಗೆ ಮಾತನಾಡಿದ್ದಾನೆ.

ಪೊಲೀಸಪ್ಪನ ಜೊತೆಗೆ ಫೋನ್ ನಲ್ಲೇ ಲಲ್ಲೆ ಹೊಡೆಯುತ್ತಿದ್ದ ಯುವತಿ ಹಾಸ್ಟೆಲ್ ನಲ್ಲಿ ವಾಸಿಸ್ತಾ ಇದ್ಲು. ಪೊಲೀಸ್ ಅಧಿಕಾರಿ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ಲು ಎನ್ನಲಾಗಿದೆ. ಇನ್ನೊಬ್ಬ ಪೊಲೀಸ್ ಅಧಿಕಾರಿ ಕೂಡ ಯುವತಿ ಜೊತೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟಿದ್ದ. ಇದಾದ ಬಳಿಕ ಅವರಿಬ್ಬರ ನಡುವೆ ನಡೆದ ಮಾತುಕತೆ ಲೀಕ್ ಆಗಿದೆ.

ತನ್ನ ಮೇಲೆ ಪೊಲೀಸರಿಗೆ ದೂರು ಕೊಡು, ಆದ್ರೆ ಯಾರೂ ಕ್ರಮ ಕೈಗೊಳ್ಳೋದಿಲ್ಲ ಅಂತಾ ಮೋಸ ಹೋದ ಯುವತಿಗೆ ಪೊಲೀಸ್ ಅಧಿಕಾರಿ ಬೆದರಿಸಿರುವ ಸಂಭಾಷಣೆ ಕೂಡ ಲಭ್ಯವಾಗಿದೆ. ನಮ್ಮನ್ನು ಬಳಸಿಕೊಳ್ಳೋದೇ ನಿಮ್ಮ ಕೆಲಸ ಅಂತಾ ಅಲವತ್ತುಕೊಂಡಿರೋ ಯುವತಿ, ತಾನು ಬಹುದೂರ ಹೊರಟುಹೋಗುವುದಾಗಿ ಹೇಳಿದ್ದಾಳೆ. ಆ ಸಂಭಾಷಣೆ ವೈರಲ್ ಆಗಿದ್ಹೇಗೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...