alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಲ್ಲಿ ಈತ ಮಾಡ್ತಿದ್ದ ಮೋಸ ನೋಡಿ ದಂಗಾದ ಪೊಲೀಸ್

atm_tildy6p

ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಬ್ಯಾಂಕ್ ಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿರುವ ಖದೀಮನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನದೆ ಅಕೌಂಟ್ ನಿಂದ ಹಣ ಡ್ರಾ ಮಾಡ್ತಾ ಇದ್ದ. ಆದ್ರೆ ವಿತ್ ಡ್ರಾ ಕ್ಯಾನ್ಸಲ್ ಮಾಡಿ ಬ್ಯಾಂಕ್ ಗೆ ಮೋಸ ಮಾಡ್ತಾ ಇದ್ದ.

ಎಂಬಿಎ ಪದವಿ ಪಡೆದಿರುವ ದಿನೇಶ್ ಕುಮಾರ್ ಲಾಲ್ ಬ್ಯಾಂಕ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಭೂಪ. ಖಾಸಗಿ ಕಂಪನಿಯೊಂದರಲ್ಲಿ ಆಡಿಟಿಂಗ್ ಕೆಲಸ ಮಾಡ್ತಿದ್ದ ದಿನೇಶ್ ತನ್ನ ಖದೀಮಗಿರಿಗೆ ಯೂಟ್ಯೂಬ್ ಸಹಾಯ ಪಡೆದಿದ್ದಾನೆ. ಆತನ ಚಾಲಾಕಿತನ ನೋಡಿದ ಪೊಲೀಸರು ದಂಗಾಗಿ ಹೋಗಿದ್ದಾರೆ.

ತನ್ನ ಅಕೌಂಟ್ ನಿಂದ 10 ಸಾವಿರ ಹಣ ಡ್ರಾ ಮಾಡ್ತಿದ್ದ ದಿನೇಶ್ ಮೊದಲ ಹಾಗೂ ಕೊನೆಯ ನೋಟುಗಳನ್ನು ಬಿಟ್ಟು ಒಳಗಿರುವ ನೋಟುಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದ. ಆತನ ಖಾತೆಯಿಂದ ಮೊದಲ ಹಣ ಡೆಬಿಟ್ ಆಗ್ತಾ ಇತ್ತು. ಆದ್ರೆ 10-15 ನಿಮಿಷ ಬಿಟ್ಟು ಡೆಬಿಟ್ ರದ್ದಾಗಿ ಖಾತೆಗೆ ಹಣ ಕ್ರೆಡಿಟ್ ಆಗ್ತಾ ಇತ್ತು.

21 ಲಕ್ಷ ರೂಪಾಯಿ ವ್ಯವಹಾರದಲ್ಲಿ ಏರುಪೇರಾದಾಗ ಬ್ಯಾಂಕ್ ನವರಿಗೆ ಅನುಮಾನ ಬಂದಿದೆ. ಪೊಲೀಸರಿಗೆ ದೂರು ನೀಡಿದಾಗ ಎಟಿಎಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ನೆರವಿನಿಂದ ಮೋಸ ಪತ್ತೆಯಾಗಿದೆ. ಹೆಂಡತಿ, ಸೋದರಳಿಯನ ಹೆಸರಿನಲ್ಲಿಯೂ ಖಾತೆ ಮಾಡಿ ಎಟಿಎಂ ಪಡೆದಿದ್ದ ದಿನೇಶ್ ಹೊಸ ಮನೆ ಖರೀದಿ ಮಾಡಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...