alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷದ ಹುಡುಗಿ ಜೊತೆ ಪ್ರೇಮ ವಿವಾಹವಾಗಿದ್ದ 50 ರ ವ್ಯಕ್ತಿ ಮಾಡಿದ್ದೇನು..?

girl-suicide-attempt-800x510

ಮಧ್ಯಪ್ರದೇಶದ ಛತರ್ಪುರ್ ದ ನಾಗಾವ್ ಎಂಬಲ್ಲಿ ಪತ್ನಿ ತವರಿಗೆ ಹೋಗ್ತಿದ್ದಂತೆ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಒಂದುವರೆ ವರ್ಷಗಳ ಹಿಂದೆ ಇಂಜಿನಿಯರಿಂಗ್ ಓದುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ಮನಿಷಾ ಚೌಧರಿ 50 ವರ್ಷದ ಸುರೇಂದ್ರ ರಾವತ್ ಜೊತೆ ಓಡಿ ಬಂದು ಪ್ರೇಮ ವಿವಾಹವಾಗಿದ್ದಳು.

ಮದುವೆ ನಂತ್ರ ಇಬ್ಬರೂ ನಾಗಾವ್ ನಲ್ಲಿ ಮನೆ ಮಾಡಿ ಅಲ್ಲಿ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಶಿವಾನಿಯಲ್ಲಿ ವಾಸವಾಗಿರುವ ತಂದೆ- ತಾಯಿಗೆ ಕರೆ ಮಾಡಿದ್ದ ಮನಿಷಾ ತಂದೆ- ತಾಯಿ ಜೊತೆ ಹೋಗುವುದಾಗಿ ಹೇಳಿದ್ದಾಳೆ. ಮನಿಷಾ ತಂದೆ-ತಾಯಿ ನಾಗಾವ್ ಗೆ ಬರ್ತಾ ಇದ್ದಂತೆ ಸುರೇಂದ್ರ ನಾಟಕ ಶುರುಮಾಡಿದ್ದಾನೆ. ತವರಿಗೆ ಹೋಗಬೇಡ ಎಂದು ಪತ್ನಿಗೆ ಹೇಳಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ.

ಅಕ್ಕಪಕ್ಕದವರು 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಮಗಳ ಒಪ್ಪಿಗೆ ಮೇರೆಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪಾಲಕರು ಹೇಳಿದ್ದಾರೆ. ಗಲಾಟೆ ಹೆಚ್ಚಾಗಿದ್ದರಿಂದ ಪೊಲೀಸರು ಠಾಣೆಯಿಂದ ಅವರನ್ನು ಹೊರಗೆ ಕಳುಹಿಸಿದ್ದಾರೆ.

ಮನಿಷಾ ತಂದೆ-ತಾಯಿ ಜೊತೆ ಬಸ್ ಹತ್ತುತ್ತಿದ್ದಂತೆ ಸುರೇಂದ್ರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರೇಂದ್ರನಿಗೆ ಮೊದಲು ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಒಬ್ಬ ಮಗಳು ಮನಿಷಾ ವಯಸ್ಸಿನವಳು. ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ಮನಿಷಾಳನ್ನು ಮದುವೆಯಾಗಿದ್ದ ಸುರೇಂದ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...