alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ಬೆತ್ತಲೆ ಮಾಡಿದ್ದ ಆರೋಪಿ ಅರೆಸ್ಟ್

aret 24

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ರಜೆ ಕಳೆಯಲು ವಿಹಾರಕ್ಕೆ ಬಂದಿದ್ದ ಪ್ರೇಮಿಗಳನ್ನು ಬೆದರಿಸಿ ಬೆತ್ತಲಾಗಿಸಿದ್ದಲ್ಲದೇ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ಯುವಕ, ಯುವತಿ ಪ್ರೀತಿಸುತ್ತಿದ್ದರು. ಇಬ್ಬರೂ ಭಾನುವಾರ ರಜೆ ಕಳೆಯಲು ಸಿದ್ಧರಬೆಟ್ಟಕ್ಕೆ ಹೋಗಿದ್ದು, ಅಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಖಾಕಿ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬ, ಗಾರ್ಡ್ ಎಂದು ಹೇಳಿಕೊಂಡು ಯುವಕನನ್ನು ವಿಚಾರಣೆ ಮಾಡುವುದಾಗಿ ಬಟ್ಟೆ ಬಿಚ್ಚಿಸಿ, ಬೆಟ್ಟದ ಗುಹೆಯಲ್ಲಿ ದಬ್ಬಿದ್ದಲ್ಲದೇ, ಯುವತಿಯ ಬಟ್ಟೆ ಬಿಚ್ಚಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದ. ಯುವತಿ ಪ್ರತಿಭಟಿಸಿದಾಗ ಬಟ್ಟೆ, ಹಣ, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ.

ರಾತ್ರಿಯೆಲ್ಲಾ ಕತ್ತಲಲ್ಲಿ ಬೆತ್ತಲಾಗಿಯೇ ಕಾಲ ಕಳೆದ ಯುವತಿ ಮರದ ಸೊಪ್ಪಿನಿಂದ ಮೈ ಮುಚ್ಚಿಕೊಂಡು ಬೆಟ್ಟ ಇಳಿದಿದ್ದು, ಇದನ್ನು ಕಂಡ ಗ್ರಾಮಸ್ಥರೊಬ್ಬರು ಬಟ್ಟೆ ತಂದುಕೊಟ್ಟಿದ್ದರು. ಯುವಕನೂ ಅದೇ ರೀತಿ ಬಂದು ಗ್ರಾಮಸ್ಥರ ನೆರವಿನಿಂದ ಬಟ್ಟೆ ಪಡೆದಿದ್ದ. ನಂತರ ಇಬ್ಬರೂ ಕೊರಟಗೆರೆ ಪೊಲೀಸರಿಗೆ ದೂರು ನೀಡಿದ್ದರು.

ರಾಜ್ಯದ ಗಮನ ಸೆಳೆದಿದ್ದ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಚಿತ್ರದುರ್ಗ ಜಿಲ್ಲೆ ಪರಶುರಾಂಪುರದ 24 ವರ್ಷದ ಭೀಮರಾಜ್ ಎಂಬುವವನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈತ ಪ್ರೇಮಿಗಳನ್ನು ಬೆದರಿಸಿದ್ದಲ್ಲದೇ, ಮೊಬೈಲ್, ಹಣ ದೋಚಿದ್ದ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...