alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದ್ಯೋಗಿ ಪತ್ನಿಯ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿದ್ದೇ ತಪ್ಪಾಯ್ತು…!

ರಾಯ್ ಬರೇಲಿಯಲ್ಲಿ ಸೈನಿಕನೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಹತ್ಯೆ ಮಾಡಲಾಗಿದೆ. ಸಹೋದ್ಯೋಗಿಯ ಪತ್ನಿಗೆ ನೀಡ್ತಾ ಇದ್ದ ಲೈಂಗಿಕ ಕಿರುಕುಳವನ್ನು ವಿರೋಧಿಸಿದ್ದಕ್ಕೆ ಯೋಧ ಪ್ರಾಣ ಕಳೆದುಕೊಂಡಿದ್ದಾನೆ.

ಧ್ರುವ ಚೌಧರಿ ಎಂಬಾತ ಲಾನ್ಸ್ ನಾಯ್ಕ್ ಅನಿಲ್ ಕುಮಾರ್ ನನ್ನು ಮಧ್ಯಾಹ್ನ 1 ಗಂಟೆ ವೇಳೆಗೆ ಗುಂಡಿಟ್ಟು ಕೊಂದಿದ್ದಾನೆ. ಆರ್ಮಿ ಸುಬೇದಾರ್ ಪತ್ನಿಯ ಬಗ್ಗೆ ಧ್ರುವನ ಸಹೋದರ ರಾಜೇಶ್ ಅಶ್ಲೀಲವಾಗಿ ಮಾತನಾಡಿದ್ದ.

ಇತ್ತೀಚೆಗಷ್ಟೆ ಸುಬೇದಾರ್ ವಿಜಯ್ ಪಾಲ್ ಗೆ ಹಿಮಾಚಲ ಪ್ರದೇಶಕ್ಕೆ ವರ್ಗವಾಗಿತ್ತು. ಅವರ ಪತ್ನಿ ಮಾರುಕಟ್ಟೆಯಲ್ಲಿ ದಿನಸಿ ಖರೀದಿಗೆ ಬಂದಾಗ ರಾಜೇಶ್, ಆಕೆಯ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ.

ಇದನ್ನು ತಿಳಿದ ಸುಬೇದಾರ್ ವಿಜಯ್, ಅನಿಲ್ ಕುಮಾರ್ ಬಳಿ ರಾಜೇಶ್ ನನ್ನು ವಿಚಾರಿಸಿಕೊಳ್ಳುವಂತೆ ಸೂಚಿಸಿದ್ದರು. ರಾಜೇಶ್ ಮನೆಗೆ ತೆರಳಿದ ಅನಿಲ್, ಈ ರೀತಿ ಮಹಿಳೆಯರಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿ ವಾಪಸ್ ಬರುತ್ತಿದ್ದ.

ನಡುರಸ್ತೆಯಲ್ಲಿ ಆತನನ್ನು ಅಡ್ಡಗಟ್ಟಿದ ಧ್ರುವ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಬಳಿಕ ಪಿಸ್ತೂಲಿನಿಂದ ಎರಡು ಬಾರಿ ಅನಿಲ್ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಕೊಟ್ವಾಲಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...