alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಮಿ ಮೇಜರ್ ಪತ್ನಿ ಕೊಲೆಗೆ ಹೊಸ ಟ್ವಿಸ್ಟ್

ದೆಹಲಿಯ ಆರ್ಮಿ ಮೇಜರ್ ಪತ್ನಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೇಜರ್ ಪತ್ನಿ ಶೈಲಜಾ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಖಾಸಗಿ ವಾಹನವೊಂದರ ಬಗ್ಗೆ ಮಾಹಿತಿ ಸಿಕ್ಕಿದೆ. ಶೈಲಜಾ ಈ ವಾಹನದಲ್ಲಿ ಅಪರಿಚಿತನ ಜೊತೆ ಸಂಚರಿಸಿದ್ದಳು ಎನ್ನಲಾಗಿದೆ. ಕೊಲೆಗೆ ಪ್ರೇಮ ಪ್ರಕರಣ ಕಾರಣವಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ಕೊಲೆಯಲ್ಲಿ ಮೂವರು ಭಾಗಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶೈಲಜಾ ಫೋನ್ ನಲ್ಲಿ ಕೆಲವೊಂದು ಮಹತ್ವದ ಸುಳಿವು ಸಿಕ್ಕಿದೆ. ಕೊಲೆಗೂ ಮೊದಲು ಕೊಲೆ ಆರೋಪಿ ಹಾಗೂ ಶೈಲಜಾ ಮಧ್ಯೆ ಗಲಾಟೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಸುಮಾರು 6 ತಂಡಗಳು ಪ್ರಕರಣದ ತನಿಖೆಯಲ್ಲಿ ನಿರತವಾಗಿವೆ.

ಶೈಲಜಾ ಪರಿಚಿತರೇ ಈ ಕೆಲಸ ಮಾಡಿದ್ದಾರೆ. ಆರೋಪಿಗಳು ಭಾರತೀಯ ಸೇನೆ ಜೊತೆ ಸಂಬಂಧ ಹೊಂದಿಲ್ಲ. ಶೈಲಜಾಗೆ ಕರೆ ಮಾಡ್ತಿದ್ದ ಇಬ್ಬರ ಫೋನ್ ಸ್ವಿಚ್ ಆಫ್ ಆಗಿದೆ. ಲೂಟಿ ಅಥವಾ ಲೈಂಗಿಕ ಕಿರುಕುಳಕ್ಕೆ ಈ ಹತ್ಯೆ ನಡೆದಿಲ್ಲವೆಂದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿದೆ.

ಆರ್ಮಿ ಮೇಜರ್ ಅಮಿತ್ ಜೊತೆ ಶೈಲಜಾ ಮದುವೆ 2009 ರಲ್ಲಿ ನಡೆದಿತ್ತು. 6 ವರ್ಷದ ಮಗನಿದ್ದಾನೆ. ದಿಮಾಪುರದ ನಾಗಾಲ್ಯಾಂಡ್ ನಲ್ಲಿ ಅಮಿತ್ ಕೆಲಸ ಮಾಡ್ತಿದ್ದಾರೆ. ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಶೈಲಜಾ ನಾಲ್ಕೈದು ದಿನಗಳಿಂದ ಆಸ್ಪತ್ರೆಗೆ ಹೋಗ್ತಿದ್ದಳು. ಶನಿವಾರ ಬೆಳಿಗ್ಗೆ 10 ಗಂಟೆಗೆ ಆರ್ಮಿ ಕಾರಿನಲ್ಲಿಯೇ ಆರ್ಮಿ ಆಸ್ಪತ್ರೆಗೆ ಶೈಲಜಾ ಹೋಗಿದ್ದಳು. ಮಧ್ಯಾಹ್ನ 1.30 ರ ಸುಮಾರಿಗೆ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಬಳಿ ಶೈಲಜಾ ಮೃತದೇಹ ಸಿಕ್ಕಿತ್ತು. ಘಟನೆ ನಡೆದ ನಾಲ್ಕು ಗಂಟೆ ಬಳಿಕ ಶೈಲಜಾ ಪತಿ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...