alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ರಿಮೋಟ್ ಕೊಡದಿದ್ದಕ್ಕೆ ನೇಣಿಗೆ ಶರಣಾದ್ಲು ಬಾಲಕಿ…!

ಟಿವಿ ರಿಮೋಟ್ ಗಾಗಿ ಅಕ್ಕನೊಂದಿಗೆ ಜಗಳವಾಡಿಕೊಂಡು, ಹತ್ತು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೋಯ್ಡಾದಲ್ಲಿ ನಡೆದಿದೆ. ಮಾನುಷಿ ರಾವತ್ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಬೆಳಗ್ಗೆ ತಂದೆ-ತಾಯಿ ಆಫೀಸಿಗೆ ತೆರಳಿದಾಗ, ಅಕ್ಕ ತಂಗಿ ಇಬ್ಬರೇ ಮನೆಯಲ್ಲಿದ್ದರು. ಈ ವೇಳೆ ಟಿವಿ ರಿಮೋಟ್ ಗಾಗಿ ಇಬ್ಬರು ಜಗಳವಾಡಿಕೊಂಡಿದ್ದಾರೆ. ಆದ್ರೆ ರಿಮೋಟ್ ಕೊಡಲು ಅಕ್ಕ ನಿರಾಕರಿಸಿದ್ದಕ್ಕೆ, ಆಕ್ರೋಶಗೊಂಡ 10 ವರ್ಷದ ಮಾನುಷಿ ರೂಮಿನಲ್ಲಿ ಹೋಗಿ, ಕಿಟಕಿಗೆ ಸ್ಕಾರ್ಪ್ ಕಟ್ಟಿ ಅದ್ರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಅದೇ ಬಿಲ್ಡಿಂಗ್ ನಲ್ಲಿ ಮೂರನೇ ಅಂತಸ್ತಿನಲ್ಲಿ ವಾಸವಿದ್ದ, ಮಾನುಷಿಯ ಅಜ್ಜಿ ಕೆಳಗಿಳಿದು ಬಂದಾಗ ಮೊಮ್ಮಗಳು ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ. ತಕ್ಷಣವೇ ಅಜ್ಜಿ ಅಕ್ಕಪಕ್ಕದವರನ್ನು ಕರೆದು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಮಾನುಷಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಮಾನುಷಿ ಪೋಷಕರು ಇದೂವರೆಗೆ ಯಾವುದೇ ದೂರು ದಾಖಲಿಸಿಲ್ಲ. ಸದ್ಯ ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...