alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಸೇವನೆ ಕಾರಣಕ್ಕೆ ನಡೆಯಿತು ಬರ್ಬರ ಹತ್ಯೆ

ಧೂಮಪಾನ ಮಾಡುವವರಿಂದ ಈ ಅಭ್ಯಾಸವುಳ್ಳದವರು ಸಾಕಷ್ಟು ಕಿರಿಕಿರಿಯನ್ನನುಭವಿಸುತ್ತಾರೆ. ಧೂಮಪಾನದ ವೇಳೆ ಆ ಜಾಗದಲ್ಲಿದ್ದವರು ಸ್ವತಃ ಧೂಮಪಾನ ಮಾಡದಿದ್ದರೂ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. ರಷ್ಯಾದಲ್ಲಿ ಧೂಮಪಾನದ ವಿಷಯಕ್ಕೆ ಸಂಬಂಧಿಸಿದಂತೆ ಬರ್ಬರ ಹತ್ಯೆಯೊಂದು ನಡೆದಿದೆ.

ಮಾಸ್ಕೋದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಸ್ನೇಹಿತರು ಒಂದೇ ಫ್ಲಾಟ್ ನಲ್ಲಿ ವಾಸವಾಗಿದ್ದರು. ಅದರಲ್ಲಿ ಒಬ್ಬನಿಗೆ ವಿಪರೀತ ಸಿಗರೇಟ್ ಸೇವನೆ ಮಾಡುವ ಚಟವಿದ್ದು, ಇದರಿಂದಾಗಿ ಸಿಗರೇಟ್ ಸೇದದ ಆತನ ಸ್ನೇಹಿತ ಕಿರಿಕಿರಿ ಅನುಭವಿಸಿದ್ದಾನೆ.

ಇತ್ತೀಚೆಗೆ ಸಿಗರೇಟ್ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಾರೀ ಜಗಳವೇ ನಡೆದಿದ್ದು, ಸಿಗರೇಟ್ ಸೇವನೆ ಚಟವಿದ್ದವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆತನ ಮರ್ಮಾಂಗವನ್ನೂ ಕತ್ತರಿಸಿದ್ದು, ಮೊದಲಿಗೆ ಇದೊಂದು ಪ್ರೇಮ ಪ್ರಕರಣವೆಂದು ಭಾವಿಸಿದ್ದ ಪೊಲೀಸರು ಕೊಲೆಗೀಡಾದವನ ಫ್ಲಾಟ್ ನಲ್ಲಿದ್ದವನ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...