alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯಿಂದ ಹೇಯಕೃತ್ಯ

ಕಾಕಿನಾಡ: ಸಹೋದರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ, ತನ್ನ ಪತಿಯನ್ನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಕಾಕಿನಾಡ ಗ್ರಾಮಾಂತರ ಪ್ರದೇಶದ ರಮಣಯ್ಯಪೇಟೆಯಲ್ಲಿ ಘಟನೆ ನಡೆದಿದ್ದು, ಕೃತ್ಯವೆಸಗಿದ ಮಹಿಳೆ ಹಾಗೂ ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ರಾಯುಡು ಹರಿ ಕೊಲೆಯಾದ ವ್ಯಕ್ತಿ. ಪತ್ನಿ ಭಾನುಚಂದು ಹಾಗೂ ಮೂವರು ಹೆಣ್ಣು ಮಕ್ಕಳ ಸುಖವಾದ ಸಂಸಾರ ಅವರದ್ದಾಗಿತ್ತು. ಭಾನುಚಂದು ತಂದೆಯ 2 ನೇ ಪತ್ನಿಯ ಮಗ ಭವಾನಿ ಪ್ರಸಾದ್ ಎಂಟ್ರಿ ಕೊಟ್ಟಿದ್ದೇ ದುರಂತಕ್ಕೆ ಕಾರಣವಾಗಿದೆ.

ಭಾನುಚಂದು ತನ್ನ ಚಿಕ್ಕಮ್ಮನ ಮಗ ಭವಾನಿ ಪ್ರಸಾದ್ ನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದು, ಈ ವಿಚಾರ ಗೊತ್ತಾಗಿ ಹರಿ ಜಗಳವಾಡಿದ್ದಾನೆ. ತಮ್ಮನೊಂದಿಗೆ ಸೇರಿಕೊಂಡು ಪತಿಯನ್ನು ಹತ್ಯೆ ಮಾಡಿದ ಭಾನು ಮೃತದೇಹವನ್ನು ಹೊರವಲಯಕ್ಕೆ ಕೊಂಡೊಯ್ದು ಸುಟ್ಟು ಹಾಕಿದ್ದಾಳೆ. ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಅನೈತಿಕ ಸಂಬಂಧದ ಕಾರಣದಿಂದ ಹತ್ಯೆ ನಡೆದಿರುವ ಸಂಗತಿ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...