alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ನೌಕರನ ಆಸ್ತಿ ವಿವರ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

1984 ರಲ್ಲಿ ಬಿಲ್ಡಿಂಗ್ ಇನ್ಸ್ ಪೆಕ್ಟರ್ ಆಗಿ ಆತ ಸರ್ಕಾರಿ ನೌಕರಿಗೆ ಸೇರಿದ ವೇಳೆ ಸಂಬಳ ಕೇವಲ 1,300 ರೂಪಾಯಿ. ಹಂತ ಹಂತವಾಗಿ ಆತ ಪ್ರಮೋಷನ್ ಪಡೆದು ಇತ್ತೀಚೆಗಷ್ಟೇ ಹತ್ತಿರತ್ತಿರ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದವನು ತನ್ನ ಸೇವಾವಧಿಯಲ್ಲಿ ಅಕ್ರಮವಾಗಿ ಸಂಪಾದಿಸಿರುವ ಆಸ್ತಿ ವಿವರ ಕೇಳಿದ್ರೆ ಬೆಚ್ಚಿ ಬೀಳ್ತಿರಿ. ಅಂದ ಹಾಗೇ ಆತ ಯಾವುದೇ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿರಲಿಲ್ಲ.

ಹೌದು. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರಾಭಿವೃದ್ದಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪಶುಪತಿ ಪ್ರದೀಪ್ ಕುಮಾರ್ ನಿವಾಸದ ಮೇಲೆ ತಮಗೆ ಬಂದ ದೂರುಗಳ ಆಧಾರದ ಮೇಲೆ ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೂಡಾ ಆತನ ಆಸ್ತಿ ವಿವರ ಕಂಡು ದಂಗಾಗಿದ್ದಾರೆ.

ಪ್ರದೀಪ್ ಕುಮಾರ್ ಒಟ್ಟಾರೆ 60 ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಹಲವೆಡೆ ಸ್ವಂತ ಹಾಗೂ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಹೊಂದಿದ್ದಾನೆ. ಈತನ ಆಸ್ತಿ ಪಟ್ಟಿಯಲ್ಲಿ ವಾಸ ಯೋಗ್ಯ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ 9.20 ಎಕರೆ ಕೃಷಿ ಭೂಮಿಯಿದ್ದು, 2.7 ಕೆ.ಜಿ. ಚಿನ್ನ, 12.5 ಕೆ.ಜಿ. ಬೆಳ್ಳಿಯಲ್ಲದೇ ಬಲು ದುಬಾರಿಯ ಎರಡು ಫ್ಲಾಟಿನಂ ರಿಂಗ್ ಗಳೂ ಪತ್ತೆಯಾಗಿವೆ.

ದಾಳಿ ಮಾಡಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಅಚ್ಚರಿ ತಂದ ಸಂಗತಿಯೆಂದರೆ ಈತನ ಮನೆಯಲ್ಲಿ ನೀರು ಕುಡಿಯುವ ಲೋಟದಿಂದ ಹಿಡಿದು ಪೂಜಾ ಗೃಹದ ದೀಪಗಳು ಹಾಗೂ ಅಲಮಾರಿನ ಕೀ ಸಹ ಬೆಳ್ಳಿಯಿಂದ ಮಾಡಲಾಗಿತ್ತು. ಬಗೆದಷ್ಟೂ ಈತನ ಆಸ್ತಿ ವಿವರ ಹೊರ ಬೀಳುತ್ತಲೇ ಇದ್ದು ತನಿಖೆ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...