alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಪನಿಯಿಂದಲೇ ನೌಕರ ಕದ್ದಿದ್ದ 234 ಮೊಬೈಲ್…!

ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ನೌಕರನೊಬ್ಬ ಬರೋಬ್ಬರಿ 234 ದುಬಾರಿ ಬೆಲೆಯ ಮೊಬೈಲ್ ಗಳನ್ನು ಕಳವು ಮಾಡಿದ್ದು, ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪುಣೆಯ ಅಮೆಜಾನ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷದ ಸೂರಜ್ ಸುರೇಶ್ ಕದಂ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 10 ಲಕ್ಷದ 38 ಸಾವಿರ ರೂ. ಮೌಲ್ಯದ 45 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಏರ್ಪೋರ್ಟ್ ನಲ್ಲಿ ಅಮೆಜಾನ್ ಶಿಪ್ ಮೆಂಟ್ ನಿಂದ ಬ್ರಾಂಡೆಡ್ ಮೊಬೈಲ್ ಗಳಾದ ಎಲ್ ಜಿ, ಸ್ಯಾಮ್ಸಂಗ್, ಒನ್ ಪ್ಲಸ್, ರೆಡ್ ಮಿ ಮೊಬೈಲ್ ಗಳನ್ನು ಎಗರಿಸಿದ್ದ ಕದಂ, ಅವುಗಳನ್ನು ಸ್ನೇಹಿತರು, ಸಂಬಂಧಿಕರಿಗೆ ಹಾಗೂ OLX ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದನ್ನೆನ್ನಲಾಗಿದೆ.

ತಾನು ಮಾರಾಟ ಮಾಡಿದ್ದ ಮೊಬೈಲ್ ಗಳಿಗೆ ಬಿಲ್ಲನ್ನು ನೀಡುತ್ತಿದ್ದುದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲವೆನ್ನಲಾಗಿದ್ದು, ಇದೀಗ ಪೊಲೀಸರ ಬಲೆಗೆ ಬಿದ್ದು ಕಂಬಿ ಎಣಿಸುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...