alex Certify
ಕನ್ನಡ ದುನಿಯಾ       Mobile App
       

Kannada Duniya

14 ವರ್ಷದ ಮಗಳನ್ನೇ ವೇಶ್ಯಾವಾಟಿಕೆಗೆ ಮಾರಿದ ಕುಡುಕ ತಂದೆ

father

ತೆಲಂಗಾಣದ ಕೃಷ್ಣಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕುಡುಕನಾಗಿದ್ದ ತಂದೆಯೇ ಅವಳನ್ನು ವೇಶ್ಯಾವಾಟಿಕೆ ನಡೆಸ್ತಾ ಇದ್ದ ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದ. ನಂತರ ತನ್ನ ಮಗಳನ್ನು ಅಪಹರಿಸಲಾಗಿದೆ ಅಂತಾ ಪೊಲೀಸರಿಗೆ ದೂರು ನೀಡಿದ್ದ.

ನಂತರ ಬಾಲಕಿಯನ್ನು ಇನ್ನು ಮೂವರಿಗೆ ಮಾರಾಟ ಮಾಡಲಾಗಿತ್ತು. ಈ ಘಟನೆ ನಡೆದು ಒಂದು ತಿಂಗಳ ಬಳಿಕ ಬಾಲಕಿಯ ತಂದೆ, ದಂಧೆ ಮಾಡ್ತಾ ಇದ್ದ ಮಹಿಳೆ ಸತ್ತಿ ಸುಧಾರಾಣಿ ಮತ್ತು ಮೂವರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಪ್ರಕಾಶಂ ಜಿಲ್ಲೆಯ ಸುಧಾರಾಣಿ 3 ತಿಂಗಳ ಹಿಂದಷ್ಟೆ ಮಿರ್ಯಾಲಗುಡಕ್ಕೆ ಶಿಫ್ಟ್ ಆಗಿದ್ಲು. ಆಕೆಗೆ ಬಾಡಿಗೆ ಮನೆ ಹುಡುಕಲು ಭೂತರಾಜು ಕೃಷ್ಣ ಸಹಾಯ ಮಾಡಿದ್ದ. ನಂತರ ಹಣ ಕೊಡುವಂತೆ ಪೀಡಿಸಲಾರಂಭಿಸಿದ್ದ. ಆಕೆ ಕೊಡದೇ ಇದ್ದಾಗ, ತನ್ನ 14 ವರ್ಷದ ಮಗಳನ್ನು ತೆಗೆದುಕೊಂಡು ಹಣ ಕೊಡು ಅಂತಾ ಹೇಳಿದ್ದ.

ಹುಡುಗಿಯನ್ನು ಪೂರೈಸುವುದಾಗಿ ಹೇಳಿ ಪವನ್, ಜವಾಹರ್ ಮತ್ತು ಮೊಹಮ್ಮದ್ ವಹೀದ್ ಬಳಿ 5000 ಪಡೆದಿದ್ದ ಸುಧಾರಾಣಿ, ಅದರಲ್ಲಿ 3000 ರೂಪಾಯಿಯನ್ನು ಕೃಷ್ಣನಿಗೆ ಕೊಟ್ಟಿದ್ದಳು. ಅದಕ್ಕೆ ಬದಲಾಗಿ ಕೃಷ್ಣ ತನ್ನ ಮಗಳನ್ನು ಕಳಿಸಿಕೊಟ್ಟಿದ್ದ. ಕೆಲ ದಿನಗಳ ನಂತರ ಬಾಕಿ ಹಣಕ್ಕಾಗಿ ಕೃಷ್ಣ ಪೀಡಿಸಲಾರಂಭಿಸಿದ್ದ.

ಸುಧಾರಾಣಿ ಹಣ ಕೊಡದೇ ಇದ್ದಾಗ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಅಂತಾ ಪೊಲಿಸರಿಗೆ ದೂರು ಕೊಟ್ಟಿದ್ದ. ನಲಗೊಂಡದ ಮನೆಯೊಂದರಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಕರೆತರಲಾಗಿದೆ. ಪಾಪಿ ತಂದೆಯೊಂದಿಗೆ ವಾಸಿಸಲು ಆಕೆ ನಿರಾಕರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...