alex Certify
ಕನ್ನಡ ದುನಿಯಾ       Mobile App
       

Kannada Duniya

11ನೇ ಕ್ಲಾಸ್ ನಲ್ಲಿ ಓದ್ತಿದ್ದ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳಿಂದ ಲೈಂಗಿಕ ಕಿರುಕುಳ

ರಾಜಸ್ತಾನದ ಅಜ್ಮೀರ್ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ 11 ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮೇಲೆ ದುಷ್ಕೃತ್ಯ ನಡೆದಿದೆ. ಹಿರಿಯ ವಿದ್ಯಾರ್ಥಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿ ಆರೋಪ ಮಾಡಿದ್ದಾನೆ. POCSO ಆ್ಯಕ್ಟ್ ಅಡಿಯಲ್ಲಿ 6 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಆರೋಪ ಹೊರಿಸಿದ ವಿದ್ಯಾರ್ಥಿ ಉತ್ತರ ಪ್ರದೇಶದ ನಿವಾಸಿಯಂತೆ. ಆರೋಪಿಗಳು ರಾಜಸ್ತಾನದವರು ಎನ್ನಲಾಗಿದೆ.

ಅಜ್ಮೀರದ ಪ್ರಸಿದ್ಧ ಕಾಲೇಜಿನಲ್ಲಿ ದೇಶ, ವಿದೇಶಿ ಮಕ್ಕಳು ಅಧ್ಯಯನ ಮಾಡ್ತಿದ್ದಾರೆ. ಕಾಲೇಜಿನ 6 ಹಿರಿಯ ವಿದ್ಯಾರ್ಥಿಗಳು 11 ನೇ ತರಗತಿ ವಿದ್ಯಾರ್ಥಿಗೆ ಸತತ 15 ದಿನಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರಂತೆ. ಡ್ರಗ್ಸ್ ಹಾಗೂ ಮಾಂಸಹಾರ ಸೇವನೆಗೆ ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ. ಪೀಡಿತ ಹಾಗೂ ಆರೋಪಿಗಳೆಲ್ಲ ಪ್ರತಿಷ್ಠಿತ ಮನೆತನದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ವ್ಯಸನಿಗಳಾಗಿದ್ದ ವಿದ್ಯಾರ್ಥಿಗಳು ಜುಲೈ 10 ರಿಂದ ಜುಲೈ 20 ರ ಮಧ್ಯೆ ಕಿರುಕುಳ ನೀಡಿದ್ದಾರೆ. ಜುಲೈ 26 ರಂದು ವಿದ್ಯಾರ್ಥಿ ಕಾಲೇಜಿನಿಂದ ಓಡಿ ಹೋಗಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಿನ್ಸಿಪಾಲರು ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಮಾಧ್ಯಮಗಳಿಂದ ದೂರವಿರುವಂತೆ ಪಾಲಕರಿಗೆ ಪತ್ರ ಬರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...