alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಇಂಡಿಯಾ ಸೈಟ್ ಹ್ಯಾಕ್ ಮಾಡಿ ದೇಶ ಸುತ್ತಿದ

anitesh

ಜಗತ್ತು ಸುತ್ತುವ ಆಸೆ ಅನೇಕರಿಗಿರುತ್ತದೆ. ಹೊಸ ಹೊಸ ಜಾಗಗಳನ್ನು ಕಣ್ತುಂಬಿಕೊಳ್ಳುವ ಹವ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಅನಿತೇಶ್ ಗಿರಿ ಗೋಸ್ವಾಮಿ ಕೂಡ ದೇಶ ಸುತ್ತಲು ಮುಂದಾಗಿದ್ದಾನೆ. ಆದ್ರೆ ಇದಕ್ಕೆ ಅನಿತೇಶ್ ತುಳಿದ ದಾರಿ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.

ಕೇವಲ 23 ವರ್ಷದ ಐಟಿ ತಜ್ಞ ಅನಿತೇಶ್ ಏರ್ ಇಂಡಿಯಾ, ಕಿಂಗ್ ಫಿಷರ್ ಸೇರಿದಂತೆ ದೊಡ್ಡ ವಿಮಾನ ಯಾನ ಸಂಸ್ಥೆಗಳಲ್ಲಿ ನೌಕರಿ ಮಾಡಿದ್ದಾನೆ. ಕಂಪನಿಗಳಲ್ಲಿ ಕೆಲಸ ಮಾಡಿದ ಅನಿತೇಶ್ ಮೊದಲು ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಂಡಿದ್ದಾನೆ. ನಂತ್ರ ನಕಲಿ ಟಿಕೆಟ್ ತಯಾರಿಸಿ ದೇಶ ಸುತ್ತಿದ್ದಾನೆ.

ಕೆಲ ಟಿಕೆಟ್ ಗಳಲ್ಲಿ ಆತನೇ ಪ್ರವಾಸ ಮಾಡಿದ್ರೆ ಮತ್ತೆ ಕೆಲ ಟಿಕೆಟನ್ನು ಟ್ರಾವೆಲ್ ಏಜೆನ್ಸಿಗೆ ನೀಡಿದ್ದಾನೆ. ಅನಿತೇಶ್ ಶ್ರೀನಗರ, ಲೇಹ್, ಲಡಾಖ್, ಜಮ್ಮು ಸೇರಿದಂತೆ ಅನೇಕ ಪ್ರದೇಶಗಳನ್ನು ನೋಡಿ ಬಂದಿದ್ದಾನೆ. ದೆಹಲಿ ಸೈಬರ್ ಅಪರಾಧ ದಳ ಜೈಪುರದಲ್ಲಿ ಅನಿತೇಶ್ ನನ್ನು ಬಂಧಿಸಿದೆ. ಪುಣೆಯಲ್ಲಿ ಬಿಸಿಎ ಮಾಡಿದ್ದ ಅನಿತೇಶ್ ನಿಂದ ಲ್ಯಾಪ್ ಟಾಪ್, ಮೊಬೈಲ್ ಹಾಗೂ ಏರ್ ಇಂಡಿಯಾಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...