alex Certify
ಕನ್ನಡ ದುನಿಯಾ       Mobile App
       

Kannada Duniya

ಬುದ್ಧಿವಂತ ವಿಜ್ಞಾನಿಯಿಂದ ಹೇಸಿಗೆ ಕೆಲಸ

ಆಗ್ರಾದಲ್ಲಿ ವರಿಷ್ಠ ವಿಜ್ಞಾನಿಯೊಬ್ಬ ನಾಚಿಕೆಗೇಡಿ ಕೆಲಸ ಮಾಡಿದ್ದಾನೆ. ಕುಷ್ಠ ರೋಗ ನಿವಾರಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಜಲ್ಮಾದ ಹಿರಿಯ ವಿಜ್ಞಾನಿ ಡಾ.ವಿಷ್ಣು ದತ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ವಿಷ್ಣು ದತ್ ಶರ್ಮಾ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಐದು ಮತ್ತು ಆರು ವರ್ಷದ ಬಾಲಕಿಯರನ್ನು 62 ವರ್ಷದ ಶರ್ಮಾ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಮಿಠಾಯಿ ಹಾಗೂ ಚಾಕೋಲೇಟ್ ನೀಡುವುದಾಗಿ ಬಾಲಕಿಯರನ್ನು ಮನೆಗೆ ಕರೆಯುತ್ತಿದ್ದ ಶರ್ಮಾ ಕಳೆದ 2 ತಿಂಗಳಿಂದ ಈ ಕೃತ್ಯವೆಸಗುತ್ತಿದ್ದ. ಸೋಮವಾರ ಪೀಡಿತೆ ತಾಯಿ ಬಾಲಕಿ ಶರ್ಮಾ ಮನೆಯಿಂದ ಹೊರ ಬರುವುದನ್ನು ನೋಡಿದ್ದಾಳೆ. ಈ ವೇಳೆ ಬಾಲಕಿ ತಾಯಿಗೆ ಎಲ್ಲ ವಿಷ್ಯ ಹೇಳಿದ್ದಾಳೆ. ಇನ್ನೊಬ್ಬ ಬಾಲಕಿ ತಾಯಿ ಕೂಡ ಸ್ಥಳಕ್ಕೆ ಬಂದಿದ್ದಾಳೆ. ಇಬ್ಬರು ಬಾಲಕಿಯರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಶರ್ಮಾ ಮೈಕ್ರೋ ಬಯಾಲಜಿ ಇಲಾಖೆಯ ಮುಖ್ಯಸ್ಥನಾಗಿದ್ದಾನೆ. ಮಗ ಅಮೆರಿಕಾದಲ್ಲಿದ್ದು, ಮಗಳು ದೆಹಲಿಯಲ್ಲಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...