alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲು ಪೋರ್ನ್ ಚಿತ್ರ ನೋಡಿ ನಂತ್ರ ಇಂಥ ಯಡವಟ್ಟು ಮಾಡ್ದ ಅಪ್ರಾಪ್ತ

ಮಹಾರಾಷ್ಟ್ರದ ಸತಾರಾದಲ್ಲಿ 14 ವರ್ಷದ ಹುಡುಗನೊಬ್ಬ ತನ್ನ ಸೋದರ ಸಂಬಂಧಿ ಮಗಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಘಟನೆ ಮಾರ್ಚ್ 21ರಂದು ನಡೆದಿದೆ. ಎರಡು ತಿಂಗಳ ನಂತ್ರ ಮಗುವಿನ ಶವ ಮಣ್ಣಿನಡಿ ಸಿಕ್ಕಿದೆ. ವಿಚಾರಣೆ ನಂತ್ರ ಆರೋಪಿ ಯಾರೆಂಬುದು ಬಹಿರಂಗವಾಗಿದೆ.

14 ವರ್ಷದ ಆರೋಪಿ ಮೊದಲು ತನ್ನ ಸ್ನೇಹಿತರ ಜೊತೆ ಸೇರಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದಾನೆ. ನಂತ್ರ ಮನೆ ಕಡೆ ಬಂದಿದ್ದಾನೆ. ಈ ವೇಳೆ ಸೋದರ ಸಂಬಂಧಿ ಮಗಳು 8 ವರ್ಷದ ಬಾಲಕಿ ಕಾಣಿಸಿದ್ದಾಳೆ. ನಿರ್ಮಾಣ ಹಂತದ ಕಟ್ಟಡದೊಳಗೆ ಆಕೆಯನ್ನು ಕರೆದೊಯ್ದ ಆರೋಪಿ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಮಗು ಅಳ್ತಿದ್ದಂತೆ ಅಲ್ಲಿಯೇ ಬಿಟ್ಟು ಮನೆಗೆ ವಾಪಸ್ ಬಂದಿದ್ದಾನೆ.

ನಂತ್ರ ಮತ್ತೆ ಹೋಗಿದ್ದಾನೆ. ಆಗ್ಲೂ ಬಾಲಕಿ ಅಲ್ಲೇ ಅಳುತ್ತ ನಿಂತಿದ್ದಳು ಎನ್ನಲಾಗಿದೆ. ತಂದೆಗೆ ನಿನ್ನ ಬಗ್ಗೆ ಹೇಳುತ್ತೇನೆಂದು ಬಾಲಕಿ ಹೆದರಿಸಿದ್ದಾಳೆ. ಇದ್ರಿಂದ ಭಯಗೊಂಡ ಆರೋಪಿ, ಬಾಲಕಿ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದನ್ನೆಲ್ಲ ತನ್ನ ತಾಯಿಗೆ ಹೇಳಿದ್ದಾನೆ. ಮಗನ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದಲು ತಾಯಿ ಶವವನ್ನು ಮಣ್ಣಿನಲ್ಲಿ ಮುಚ್ಚಿ ಬಂದಿದ್ದಾಳೆ.

ಬಾಲಕಿ ನಾಪತ್ತೆಯಾಗಿದ್ದಾಳೆಂದು ಮಾರ್ಚ್ 21ರಂದೇ ಕುಟುಂಬಸ್ಥರು ದೂರು ನೀಡಿದ್ದರು. ಶೋಧ ಕಾರ್ಯ ಶುರುಮಾಡಿದ್ದ ಪೊಲೀಸರಿಗೆ ಎರಡು ದಿನಗಳ ನಂತ್ರ ಶವ ಸಿಕ್ಕಿದೆ. ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ ವಿಷ್ಯ ಮರಣೋತ್ತರ ಪರೀಕ್ಷೆ ನಂತ್ರ ಹೊರ ಬಿದ್ದಿದೆ. ಆರೋಪಿ ಮೊದಲು ಸ್ನೇಹಿತನ ಮೇಲೆ ಆರೋಪ ಹೊರಿಸಿದ್ದಾನೆ. ಆತನ ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...