alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯೂನಲ್ಲಿ ನಿಂತ್ರೂ ಸಿಗಲಿಲ್ಲ ಹಣ, ನಂತ್ರ ಆಕೆ ಮಾಡಿದ್ದೇನು?

stabed

ಉತ್ತರ ಪ್ರದೇಶದ ಎಟಾವಾ ಜಿಲ್ಲೆಯಲ್ಲಿ ಅಕೌಂಟ್ ನಿಂದ ಹಣ ವಿತ್ ಡ್ರಾ ಮಾಡಲಾಗದೆ ರೋಸಿ ಹೋದ ವಿದ್ಯಾರ್ಥಿನಿಯೊಬ್ಳು ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

23 ವರ್ಷದ ಗಿರಿಜಾ ಬಿ.ಎ ವಿದ್ಯಾರ್ಥಿನಿ, ಅನಾರೋಗ್ಯದಿಂದ ಬಳಲುತ್ತಿದ್ಲು. ಔಷಧ ಖರೀದಿಸಲು ಹಣ ಬೇಕಾಗಿದ್ದರಿಂದ ಕಳೆದ 15 ದಿನಗಳಿಂದ ವಿತ್ ಡ್ರಾ ಮಾಡಲು ಬ್ಯಾಂಕ್ ಗೆ ಅಲೆಯುತ್ತಿದ್ದಾಳೆ. ಕ್ಯೂನಲ್ಲಿ ನಿಂತು ನಿಂತು ಗಿರಿಜಾ ಸುಸ್ತಾಗಿದ್ಲು. ಪ್ರತಿಬಾರಿ ಆಕೆಯ ಸರದಿ ಬಂದಾಗಲೂ ಕೆವೈಸಿ ದಾಖಲೆ ಅಪೂರ್ಣವೆಂದು ಹೇಳಿ ಬ್ಯಾಂಕ್ ಸಿಬ್ಬಂದಿ ಹಣ ಕೊಡಲು ನಿರಾಕರಿಸುತ್ತಿದ್ರು.

ಕೆವೈಸಿ ಫಾರ್ಮ್ ಕೇಳಿದಾಗಲೆಲ್ಲ ತಮ್ಮ ಬಳಿಯಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸ್ತಾ ಇದ್ರು. ಮಂಗಳವಾರ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಗಿರಿಜಾಳ ಕೆವೈಸಿ ದಾಖಲೆ ಅಪೂರ್ಣವಾಗಿದೆ ಅಂತಾ ಹೇಳಿದ್ದಾರೆ. 15 ದಿನ ಕ್ಯೂನಲ್ಲಿ ನಿಂತರೂ ಹಣ ಸಿಗಲಿಲ್ಲ ಅಂತಾ ರೋಸಿ ಹೋದ ಗಿರಿಜಾ ತನ್ನ ಬ್ಯಾಗ್ ನಲ್ಲಿದ್ದ ಚಾಕು ತೆಗೆದುಕೊಂಡು ತನಗೆ ತಾನೇ ಚುಚ್ಚಿಕೊಂಡಿದ್ದಾಳೆ.

ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಸಾಮಾನ್ಯವಾಗಿ ಕೆವೈಸಿ ಫಾರ್ಮ್ ಗಳು ಬ್ಯಾಂಕ್ ನಲ್ಲಿ ಲಭ್ಯವಿರುತ್ತವೆ, ಆದ್ರೆ ನೋಟು ನಿಷೇಧದ ಬಳಿಕ ಎಲ್ಲವೂ ಖಾಲಿಯಾಗಿದ್ದು, ಕೊರತೆ ಕಂಡುಬಂದಿದೆ ಅಂತಾ ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...