alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ

flame isolated over black backgroundಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಾನು ಹಾಕಿದ್ದ ಫೋಟೋಗೆ ಸಹಪಾಠಿ, ನಿಂದನೆಯ ಕಮೆಂಟ್ ಹಾಕಿದ್ದನೆಂಬ ಕಾರಣಕ್ಕೆ ಆತನ ವಿರುದ್ದ ದೂರು ನೀಡಲು ಹೋದ ವಿದ್ಯಾರ್ಥಿಯೊಬ್ಬ ದೂರು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

20 ವರ್ಷದ ಪದವಿ ವಿದ್ಯಾರ್ಥಿ ಗೋಪಿಕೃಷ್ಣ ಎಂಬಾತ ಫೇಸ್ ಬುಕ್ ನಲ್ಲಿ ತಾನು ಹಾಕಿದ್ದ ಫೋಟೋಗೆ ಸಹಪಾಠಿ ಅಖಿಲ್ ನಿಂದನೆಯ ಕಮೆಂಟ್ ಮಾಡಿದ್ದ ಕಾರಣ ಆತನ ವಿರುದ್ದ ದೂರು ನೀಡಲು ವನಸ್ಥಲಿಪುರಂ ಪೊಲೀಸ್ ಠಾಣೆಗೆ ತೆರಳಿದ್ದಾನೆ.

ಆದರೆ ಸಬ್ ಇನ್ಸ್ ಪೆಕ್ಟರ್ ಸೈದುಲ್ಲಾ, ದೂರು ಸ್ವೀಕರಿಸಲು ನಿರಾಕರಿಸಿದರೆಂದು ಹೇಳಲಾಗಿದೆ. ಪಟ್ಟು ಬಿಡದ ಗೋಪಿಕೃಷ್ಣ ಪದೇ ಪದೇ ಒತ್ತಾಯಿಸಿದಾಗ ಸಿಟ್ಟಿಗೆದ್ದ ಸಬ್ ಇನ್ಸ್ ಪೆಕ್ಟರ್, ಆತನನ್ನು ಥಳಿಸಿ ಠಾಣೆಯಿಂದ ಹೊರ ಹಾಕಿದ್ದಾರೆ. ಇದರಿಂದ ಮನನೊಂದ ಗೋಪಿಕೃಷ್ಣ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...