alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನ ಕಾಮತೃಷೆಗೆ ತಾಯಿಯಾದ್ಲು 10ನೇ ತರಗತಿ ವಿದ್ಯಾರ್ಥಿನಿ

ಉತ್ತರಾಖಂಡದ ಶಾಲಾ ಶಿಕ್ಷಕನೊಬ್ಬ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ 15 ವರ್ಷದ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿ ತನ್ನ ಮಗುವಿನ ಮುಖವನ್ನು ನೋಡಲು ಇಚ್ಛಿಸುತ್ತಿಲ್ಲ.

ವಿದ್ಯಾರ್ಥಿನಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾಳೆ. ಆದ್ರೆ ಆಕೆಗೆ ಮಗುವನ್ನು ನೋಡಿಕೊಳ್ಳುವಂತೆ ಒತ್ತಡ ಹೇರಲಾಗ್ತಿದೆ. ಆಕೆಯೇ ಇನ್ನು ಮಗು. ಆಕೆಗೊಂದು ಮಗು ಬೇಡವೆಂದು ಪೀಡಿತೆಯ ತಂದೆ ಹೇಳಿದ್ದಾರೆ. ಮಗಳ ಮಗುವಿನ ಮೇಲೆ ನಮಗೆ ಮಮಕಾರವಿಲ್ಲ. ಅದನ್ನು ತಾಯಿಯಿಂದ ದೂರವಿಡಲು ಬಯಸಿದ್ದೇವೆಂದು ಅವರು ಹೇಳಿದ್ದಾರೆ.

ಸೋಮವಾರ ಮಗುವಿನ ಡಿ ಎನ್ ಎ ಪರೀಕ್ಷೆ ನಡೆಸಲಾಗಿದೆ. ಸೆಪ್ಟೆಂಬರ್ ನಲ್ಲಿ ಡೆಹ್ರಾಡೂನ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಹೊಟ್ಟೆ ನೋವು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದ ಬಾಲಕಿ 7 ತಿಂಗಳ ಗರ್ಭಿಣಿ ಎಂಬ ವಿಷ್ಯ ಗೊತ್ತಾಗಿತ್ತು. ವಿಚಾರಣೆ ವೇಳೆ ಇತಿಹಾಸ ಶಿಕ್ಷಕ ಪ್ರವೇಶ್ ಕುಮಾರ್ ಅತ್ಯಾಚಾರವೆಸಗಿದ್ದಾನೆಂದು ವಿದ್ಯಾರ್ಥಿನಿ ಹೇಳಿದ್ದಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಡಿ ಎನ್ ಎ ಪರೀಕ್ಷೆ ನಡೆಸಲಾಗಿದ್ದು, ವರದಿ 3 ತಿಂಗಳೊಳಗೆ ಬರಲಿದೆ. ವರದಿ ಬಂದ ನಂತ್ರ ಆರೋಪಿ ವಿರುದ್ಧದ ಸಾಕ್ಷ್ಯ ಇನ್ನಷ್ಟು ಬಲ ಪಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...