alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನಾಧಿಕಾರಿ ಪತ್ನಿ ಕೊಲೆ ಪ್ರಕರಣದಲ್ಲಿ ಬಯಲಾಗಿದೆ ಮತ್ತೊಂದು ಶಾಕಿಂಗ್ ಸಂಗತಿ

ಸೇನಾಧಿಕಾರಿ ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮೇಜರ್ ನಿಖಿಲ್ ಹಂದ ತನ್ನ ಮತ್ತು ಶೈಲಜಾ ದ್ವಿವೇದಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಸತ್ಯಗಳನ್ನ ವಿಚಾರಣೆಯ ವೇಳೆ ತಿಳಿಸಿದ್ದಾನೆ.

ಶೈಲಜಾ ದ್ವಿವೇದಿಯನ್ನ ಡೇಟಿಂಗ್ ವೆಬ್ಸೈಟ್ ಒಂದರಲ್ಲಿ ಪರಿಚಯಿಸಿಕೊಂಡಿದ್ದಾಗಿ ನಿಖಿಲ್ ಪೊಲೀಸರಿಗೆ ತಿಳಿಸಿದ್ದಾನೆ.

ಕ್ವಾಕ್ ಕ್ವಾಕ್ ಡಾಟ್ ಇನ್ ವೆಬ್ಸೈಟ್ನಲ್ಲಿ ನಿಖಿಲ್ ಮತ್ತು ಶೈಲಜಾ ನಡುವೆ ಚಾಟಿಂಗ್ ಮತ್ತು ಡೇಟಿಂಗ್ ನಡೀತಿತ್ತಂತೆ. ಶೈಲಜಾ ಪತಿ ಕೂಡ ಸೇನೆಯ ಮೇಜರ್ ಅಗಿರೋದ್ರಿಂದ ಅವರಿಗೆ 2015 ರಲ್ಲಿ ನಾಗಾಲ್ಯಾಂಡ್ ಗೆ ಟ್ರಾನ್ಸ್ ಫರ್ ಆಗಿತ್ತು. ಅಲ್ಲೇ ತಾವಿಬ್ಬರು ಮೊದಲು ಭೇಟಿಯಾಗಿದ್ದಾಗಿ ನಿಖಿಲ್ ವಿಚಾರಣೆಯ ವೇಳೆ ತಿಳಿಸಿದ್ದಾನೆ.

ಆರು ತಿಂಗಳ ಅವಧಿಯಲ್ಲಿ ಇಬ್ಬರ ನಡುವೆ 3500 ಮೆಸೇಜ್ ಮತ್ತು ಫೋನ್ ಕಾಲ್ ಸಂಭಾಷಣೆ ನಡೆದಿದೆ. ಈ ಸಮಯದಲ್ಲೇ ನಿಖಿಲ್, ಶೈಲಜಾ ನಡುವೆ ಹೆಚ್ಚು ಮುಖಾಮುಖಿ ಮಾತುಕತೆಗಳು ನಡೆದಿವೆ. ಹಲವು ಬಾರಿ ಶೈಲಜಾರನ್ನ ಮದುವೆಗೆ ಒತ್ತಾಯಿಸಿದ್ದ ನಿಖಿಲ್.  ಆದ್ರೆ ಶೈಲಜಾ ಅದಕ್ಕೆ ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ನಿಖಿಲ್, ಶೈಲಜಾರನ್ನ ಗುಂಡು ಹಾರಿಸಿ ಕೊಂದಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...