alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಟಾಪರ್ ಆಗಲು ನೆರವು ನೀಡಿದ್ದ ತಂದೆ ಅರೆಸ್ಟ್

after-giving-police-a-slip-for-months-bihar-arts-exam-topper-ruby-rais-father-finally-arrested-in-by-sitಪರೀಕ್ಷೆಯಲ್ಲಿ ಪಾಸ್ ಆಗಲು ನೆರವು ನೀಡುವಂತೆ ಕೇಳಿದ್ದ ಮಗಳನ್ನು ತನಗಿದ್ದ ಸಂಪರ್ಕದ ಮೂಲಕ ರಾಜ್ಯಕ್ಕೇ ಟಾಪರ್ ಆಗುವಂತೆ ಮಾಡಿದ್ದ ತಂದೆಯನ್ನು ವಿಶೇಷ ತನಿಖಾ ದಳದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ವೈಶಾಲಿ ಜಿಲ್ಲೆಯ ವಿಷ್ಣುರಾಯ್ ಕಾಲೇಜಿನ ವಿದ್ಯಾರ್ಥಿನಿ ರೂಬಿ ರಾಯ್ ಮಾಧ್ಯಮ ಸಂದರ್ಶನದ ಸಂದರ್ಭದಲ್ಲಿ ಪರೀಕ್ಷೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಹಾಸ್ಯಾಸ್ಪದ ಉತ್ತರ ನೀಡಿದ ವೇಳೆ ಪರೀಕ್ಷಾ ಅಕ್ರಮ ಬಯಲಾಗಿತ್ತು.

ಆಕೆ ಸೇರಿದಂತೆ ಟಾಪರ್ ಆಗಿದ್ದ ಮೂವರಿಗೆ ಮರು ಪರೀಕ್ಷೆ ನೀಡಿದಾಗ ಅವರುಗಳ ಬಂಡವಾಳ ಬಯಲಾಗಿದ್ದು, ಇವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದ ರೂಬಿ ರೈ, ಪಾಸ್ ಆಗಲು ನೆರವು ನೀಡುವಂತೆ ತಂದೆಗೆ ಕೋರಿದ್ದಾಗಿ ಹೇಳಿಕೆ ನೀಡಿದ್ದಳು.

ಈ ಹಿನ್ನಲೆಯಲ್ಲಿ ಆಕೆಯ ತಂದೆ ಅವಧೇಶ್ ರಾಯ್ ಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ದಳದ ಪೊಲೀಸರು ನೋಟೀಸ್ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅವಧೇಶ್ ರಾಯ್ ನನ್ನು ಈಗ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...