alex Certify
ಕನ್ನಡ ದುನಿಯಾ       Mobile App
       

Kannada Duniya

ಲಿವಿಂಗ್ ಟುಗೆದರ್ ಗೆಳತಿ ಜೊತೆ ಸೇರಿ ಕಿರುತೆರೆ ನಟಿ ಕೊಲೆ

shashirekaha

ಕಿರುತೆರೆ ಕಲಾವಿದೆ ಶಶಿರೇಖಾ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ತಿಂಗಳ ಹಿಂದೆ ಶಶಿರೇಖಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ.

ಚೆನ್ನೈನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಮುಂದುವರೆಸಿ ಸಾಕ್ಷ್ಯಾಧಾರ ಸಂಗ್ರಹಿಸಿದ್ದರು. ಶಶಿರೇಖಾ ಪತಿ ರಮೇಶ್, ಆತನ ಗೆಳತಿ ಲೌಕಿಯಾ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಇವರಿಬ್ಬರೂ ನಟಿ ಶಶಿರೇಖಾ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆತ ನೀಡಿದ ಮಾಹಿತಿ ಆಧಾರದ ಮೇಲೆ ಕಸ ಸಂಗ್ರಹಣೆ ಸ್ಥಳದಲ್ಲಿ ಸಿಕ್ಕ ಶವ ಶಶಿರೇಖಾ ಅವರದೆಂದು ಪೊಲೀಸರು ಗುರುತಿಸಿದ್ದಾರೆ.

ರಮೇಶ್ ಈ ಹಿಂದೆಯೇ ಮದುವೆಯಾಗಿದ್ದು, ಪತ್ನಿ ಮೃತಪಟ್ಟ ಕಾರಣ ಹಾಗೂ ವ್ಯವಹಾರದಲ್ಲಿ ನಷ್ಟ ಹೊಂದಿದ್ದರಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಅವಕಾಶ ಕೊಡಿಸುವುದಾಗಿ ಕೆಲವರಿಂದ ಹಣ ಕೂಡ ಪಡೆದಿದ್ದ. 2012ರಿಂದಲೂ ರಮೇಶ್, ಲೌಕಿಯಾ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಈ ನಡುವೆ ರಮೇಶ್, ಶಶಿರೇಖಾ ಅವರನ್ನು ಮದುವೆಯಾಗಿ ಒಂದು ಮಗು ಕೂಡ ಇತ್ತು. ನಂತರ ದಾಂಪತ್ಯದಲ್ಲಿ ವಿರಸ ಉಂಟಾಗಿದ್ದರಿಂದ ರಮೇಶ್, ಲೌಕಿಯಾ ಜೊತೆಗೇ ಇರಲು ಆರಂಭಿಸಿದ್ದ. ಕೊನೆಗೇ ಅವರಿಬ್ಬರೂ ಸೇರಿಕೊಂಡು ಶಶಿರೇಖಾ ಅವರನ್ನು ಕೊಲೆ ಮಾಡಿ ಕಸ ಸಂಗ್ರಹಣೆ ಸ್ಥಳದಲ್ಲಿ ಶವ ಎಸೆದಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...