alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನ ಮೇಲೆ ಲಾರಿ ಬಿದ್ದು ಚಾಲಕ ಸಾವು

ನಿಯಂತ್ರಣ ತಪ್ಪಿದ ಲಾರಿ, ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

26 ವರ್ಷದ ಪ್ರತಾಪ್ ಮೃತಪಟ್ಟ ಚಾಲಕನಾಗಿದ್ದು, ನಾಗವಾರ ಫ್ಲೈಓವರ್ ಬಳಿ ತಡರಾತ್ರಿ ಈ ದುರ್ಘಟನೆ ನಡೆದಿದೆ.

ಖಾಸಗಿ ಕಂಪನಿಯ ಸಿಬ್ಬಂದಿಯ ಡ್ರಾಪ್ ಗೆಂದು ಪ್ರತಾಪ್ ತೆರಳಿದ್ದು, ಅವರ ಕಾರಿನ ಮೇಲೆ ಲಾರಿ ಬಿದ್ದಿದೆ. ಇದರಿಂದಾಗಿ ಚಾಲಕ ಪ್ರತಾಪ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಸಂಚಾರಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...