alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರವೆಸಗಿ ಹವನ ಕುಂಡದಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ್ರು ಪಾಪಿಗಳು

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಅಮಾನವೀಯ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ಜೀವಂತ ಸುಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಒಂದಾದ ಮೇಲೆ ಒಂದರಂತೆ ಅಪರಾಧಿ ಘಟನೆಗಳು ನಡೆಯುತ್ತಲೇ ಇವೆ.

ಮಹಿಳೆ ಸಾಯುವ ಮೊದಲು 100ಕ್ಕೆ ಕರೆ ಮಾಡಿದ್ದಳಂತೆ. ಕರೆ ಹೋಗದ ಕಾರಣ ಸಹೋದರನಿಗೆ ಕರೆ ಮಾಡಿ ಮನೆಗೆ ಅಪರಿಚಿತರು ನುಗ್ಗಿದ್ದಾರೆ. ಅತ್ಯಾಚಾರವೆಸಗಿ ಜೀವಂತವಾಗಿ ಸುಡುತ್ತೇನೆಂದು ಬೆದರಿಸುತ್ತಿದ್ದಾರೆಂದು ಹೇಳಿದ್ದಳಂತೆ. ಮಹಿಳೆ ಹೇಳಿದಂತೆ ಘಟನೆ ನಡೆದಿದೆ. ಅತ್ಯಾಚಾರವೆಸಗಿದ ಪಾಪಿಗಳು ಸ್ಥಳೀಯ ದೇವಸ್ಥಾನಕ್ಕೆ ಕರೆದೊಯ್ದು ಹವನ ಕುಂಡದಲ್ಲಿ ಮಹಿಳೆಗೆ ಬೆಂಕಿ ಹಚ್ಚಿದ್ದಾರೆ.

ಘಟನೆ ನಡೆದು ಎರಡು ದಿನ ಕಳೆದ್ರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಘಟನೆ ರಾಜ್ಪುರಾದ ಪಾಠಕ್ಪುರ್ ನಲ್ಲಿ ನಡೆದಿದೆ. ಮಹಿಳೆ ಗಂಡ ಕಾರ್ಮಿಕನಾಗಿದ್ದು ಘಟನೆ ವೇಳೆ ಮನೆಯಲ್ಲಿರಲಿಲ್ಲ. ಮಗಳ ಜೊತೆ ಮಹಿಳೆ ಮಲಗಿದ್ದಾಗ ಅಲ್ಲಿಗೆ ಬಂದ 5 ಜನರು ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...