alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನ ಶೌಚಾಲಯದಲ್ಲಿ ಅತ್ಯಾಚಾರವೆಸಗಿದ್ದ ಪತಿ

ಮದುವೆ ದಿನವೇ ಪತಿ, ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದೂ ಶೌಚಾಲಯದಲ್ಲಿ. ಮದುವೆ ಕಾರ್ಯಕ್ರಮ ಇನ್ನೇನು ಮುಗಿಯಬೇಕು ಎನ್ನುವಷ್ಟರಲ್ಲಿ ಪತ್ನಿಯನ್ನು ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಘಟನೆ ಹಲವು ವರ್ಷಗಳ ಹಿಂದೆ ಬ್ರಿಟನ್ ನಲ್ಲಿ ನಡೆದಿದೆ.

ಯುಕೆ ದೂರದರ್ಶನವೊಂದು ಅತ್ಯಾಚಾರಕ್ಕೊಳಗಾದ ಮಹಿಳೆಯರ ಕಥೆಯನ್ನು ಸಾಕ್ಷ್ಯ ಚಿತ್ರದ ರೂಪದಲ್ಲಿ ತೋರಿಸಲು ಮುಂದಾಗಿದೆ. ಇದ್ರಲ್ಲಿ ಎಲಿಜಬೆತ್ ಎಂಬಾಕೆಯ ಕಥೆಯೂ ಸೇರಿದೆ. ಎಲಿಜಬೆತ್ ತನ್ನ ಕಷ್ಟದ ದಿನಗಳನ್ನು ಮಾಧ್ಯಮದ ಮುಂದಿಟ್ಟಿದ್ದಾರೆ.

ಮದುವೆ ದಿನದ ಬಗ್ಗೆ ನಾನೊಂದು ಸುಂದರ ಕನಸು ಕಂಡಿದ್ದೆ. ಆದ್ರೆ ಎಲ್ಲವೂ ನುಚ್ಚು ನೂರಾಗಿತ್ತು. ಮದುವೆ ದಿನವೇ ಪತಿ ಕ್ರೂರವಾಗಿ ನಡೆದುಕೊಂಡಿದ್ದ. ಮದುವೆ ನಂತ್ರ ಸತತ 27 ವರ್ಷಗಳ ಕಾಲ ಮೌನಿಯಾಗಿ ಆತ ನೀಡಿದ ಹಿಂಸೆಯನ್ನು ಸಹಿಸಿಕೊಂಡೆ ಎಂದು ಎಲಿಜಬೆತ್ ಹೇಳಿದ್ದಾರೆ.

ಮಹಿಳೆ ಪತಿ ಕಾಮುಕನಾಗಿದ್ದನಂತೆ. ಒಂದು ದಿನವೂ ಪ್ರೀತಿಯಿಂದ ಮಾತನಾಡಿಸಿ, ಮುತ್ತು ನೀಡಿರಲಿಲ್ಲವಂತೆ. ಪತ್ನಿ ಜೊತೆ ಕ್ರೂರಿಯಂತೆ ನಡೆದುಕೊಳ್ಳುತ್ತಿದ್ದ ಆತ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನಂತೆ. ಕೆಲವೊಮ್ಮೆ ಡ್ರಗ್ಸ್ ನೀಡಿ ಮಹಿಳೆ ಜೊತೆ ಸಂಬಂಧ ಬೆಳೆಸುತ್ತಿದ್ದನಂತೆ ಪತಿ.

ಹೊರಗಿನ ಪ್ರಪಂಚಕ್ಕೆ ಮಾದರಿ ದಂಪತಿಯಾಗಿದ್ದ ಈ ಜೋಡಿ ಜೀವನ ಮನೆಯೊಳಗೆ ಬೇರೆ ರೂಪದಲ್ಲಿರುತ್ತಿತ್ತಂತೆ. ಈ ಬಗ್ಗೆ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದ ಎಲಿಜಬೆತ್ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರದಿಂದ ಹಿಂದೆ ಸರಿದಿದ್ದರಂತೆ.

ಮಕ್ಕಳಿಗೆ ಒಳ್ಳೆ ತಂದೆಯಾಗಿದ್ದ ಪತಿಯಿಂದ ದೂರವಾಗಲು 27 ವರ್ಷಗಳ ನಂತ್ರ ಎಲಿಜಬೆತ್ ನಿರ್ಧರಿಸಿದ್ದರಂತೆ. ಈ ಬಗ್ಗೆ ಪತಿ ಮುಂದೆಯೂ ಹೇಳಿದ್ದಳಂತೆ. ಆದ್ರೆ ಆತನೇ ತನ್ನ ಜೀವ ತೆಗೆದುಕೊಂಡಿದ್ದರಿಂದ ನನ್ನ ಬದುಕು ಶಾಂತವಾಯ್ತೆಂದು ಎಲಿಜಬೆತ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...