alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ, ಮಗಳಿಗೆ ರೇಪ್ ಬೆದರಿಕೆ ನೀಡಿದ 7ನೇ ತರಗತಿ ವಿದ್ಯಾರ್ಥಿ…!

ಗುರುಗ್ರಾಮ್ ನ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಶಿಕ್ಷಕಿ ಹಾಗೂ ಅವರ ಮಗಳಿಗೆ ನೀಡಿರುವ ಧಮಕಿ ಆಶ್ಚರ್ಯ ಹುಟ್ಟಿಸುವಂತಿದೆ. ಇಂಟರ್ನೆಟ್ ಪೋಸ್ಟ್ ಮೂಲಕ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಶಿಕ್ಷಕಿ ಹಾಗೂ ಮಗಳಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ್ದಾನೆ. ಶಿಕ್ಷಕಿ ಮಗಳು ಕೂಡ ಆತನ ತರಗತಿಯಲ್ಲೇ ಓದುತ್ತಿದ್ದು ಆಕೆ ಆಘಾತಕ್ಕೊಳಗಾಗಿದ್ದಾಳೆ.

ಎಚ್ಚರಿಕೆ ನಂತ್ರವೂ ಶಿಕ್ಷಕಿ ಶಾಲೆಗೆ ಬರ್ತಿದ್ದಾರೆ. ಆದ್ರೆ ಅವ್ರ ಮಗಳು ಭಯದಿಂದ ಶಾಲೆಗೆ ಬರ್ತಿಲ್ಲ ಎಂದು ಮೂಲಗಳು ಹೇಳಿವೆ. ಇದ್ರ ಜೊತೆ ಇನ್ನೊಬ್ಬ ಇದೇ ಶಾಲೆ ವಿದ್ಯಾರ್ಥಿ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬರುವಂತೆ ಶಿಕ್ಷಕಿಯೊಬ್ಬರಿಗೆ ಆಹ್ವಾನ ನೀಡಿದ್ದಾನೆ. ಎರಡೂ ಪ್ರಕರಣ ಹಿಂದಿನ ವಾರ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಆದ್ರೆ ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ತನಿಖೆಗೆ ಮುಂದಾಗಿದೆ. ಶಾಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕರೆಯಿಸಿ ಮಾತುಕತೆ ನಡೆಸುವುದಾಗಿ ಹೇಳಿದೆ. ಕೇವಲ ಶಾಲೆಗೆ ಸಂಬಂಧಿಸಿದ ಪ್ರಕರಣವಲ್ಲ. ಸಮಾಜದ ಮೇಲೆ ಇದು ಪ್ರಭಾವ ಬೀರುತ್ತದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...