alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಿರಾಕರಿಸಿದ್ದಕ್ಕೆ ಅಶ್ಲೀಲ ಫೋಟೋ ಪೋಸ್ಟ್ ಮಾಡ್ದ..!

ಮೊದಲು ಸ್ನೇಹ ನಂತ್ರ ಪ್ರೀತಿ ಆಮೇಲೆ ಮೋಸ….ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಬೆಳೆಸಿ ಆಕೆ ಫೇಸ್ಬುಕ್ ಐಡಿ, ಪಾಸ್ವರ್ಡ್ ಪಡೆದು ಯುವಕನೊಬ್ಬ ಮೋಸ ಮಾಡಿದ್ದಾನೆ. ಹುಡುಗಿ ಮದುವೆಗೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆಕೆ ಅಶ್ಲೀಲ ಫೋಟೋವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾನೆ.

ಘಟನೆ ರಾಯ್ಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ಎತವಾ ಪಟ್ಟಣದ ಯುವಕ ಪೀಡಿತ ಯುವತಿ ಸ್ನೇಹ ಬೆಳೆಸಿದ್ದಾನೆ. ಫೇಸ್ಬುಕ್ ನಲ್ಲಿಯೇ ಇಬ್ಬರು ಪ್ರೀತಿ ಮಾತುಕತೆ ಶುರುಮಾಡಿದ್ದಾರೆ. ಮೊಬೈಲ್ ಸಂಖ್ಯೆ ವಿನಿಮಯವಾಗಿದೆ. ಯುವಕನನ್ನು ನಂಬಿ ಯುವತಿ ಫೇಸ್ಬುಕ್ ಐಡಿ ಹಾಗೂ ಪಾಸ್ವರ್ಡ್ ನೀಡಿದ್ದಾಳೆ. ಹಾಗೆ ಕೆಲ ಫೋಟೋಗಳನ್ನು ಆತನ ಮೊಬೈಲ್ ಗೆ ಕಳುಹಿಸಿದ್ದಾಳೆ.

21 ವರ್ಷದ ಪಾಲ್ ಮೋಸಿನ್ ಮದುವೆಯಾಗುವಂತೆ ಹುಡುಗಿ ಮುಂದೆ ಬೇಡಿಕೆಯಿಟ್ಟಿದ್ದಾನೆ. ಹುಡುಗಿ ಮದುವೆ ನಿರಾಕರಿಸುತ್ತಿದ್ದಂತೆ ಕೋಪಗೊಂಡ ಯುವಕ ಆಕೆ ಪಾಸ್ವರ್ಡ್ ಐಡಿ ಬಳಸಿ ಫೇಸ್ಬುಕ್ ನಲ್ಲಿ ಹುಡುಗಿಯ ಅಶ್ಲೀಲ ಫೋಟೋ ಹಾಕಿದ್ದಾನೆ. ಇದನ್ನು ನೋಡಿ ಕಂಗಾಲಾದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...