alex Certify
ಕನ್ನಡ ದುನಿಯಾ       Mobile App
       

Kannada Duniya

ಖತರ್ನಾಕ್ ಚೋರನ ಕೃತ್ಯಕ್ಕೆ ದಂಗಾದ ಪೊಲೀಸರು

atm-bihar

ಮುಜಾಫರ್ ಪುರ: ಎ.ಟಿ.ಎಂ.ನಲ್ಲಿ ಹೇಗೆ ಹಣ ದೋಚಬೇಕೆಂದು ಹೇಳಿಕೊಡಲು, ತರಬೇತಿ ಶಾಲೆ ನಡೆಸುತ್ತಿದ್ದ ಭೂಪನೊಬ್ಬನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಎ.ಟಿ.ಎಂ. ನಲ್ಲಿ ಹಣ ದೋಚುವ ಬಗ್ಗೆ ತರಬೇತಿ ನೀಡುತ್ತಿದ್ದ ಪಂಕಜ್ ಸಾಹ್ನಿ(26) ಬಂಧಿತ ಆರೋಪಿ. ಉತ್ತರ ಬಿಹಾರದ ಮುಜಾಫರ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿರುವ ಸಾಹ್ನಿ, ನಿರುದ್ಯೋಗಿ ಯುವಕರಿಗೆ ತರಬೇತಿ ಶಾಲೆ ನಡೆಸುತ್ತಿದ್ದ.

ಈತ ಭೌತಶಾಸ್ತ್ರ ಪದವೀಧರನಾಗಿದ್ದಾನೆ. ಜುಲೈ 23 ರಂದು ಅನುಮಾನದ ಮೇಲೆ ಸಾಹ್ನಿ ಹಾಗೂ ಆತನ ನಾಲ್ವರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

2010 ರಿಂದ 2012 ರಲ್ಲಿ ಇವರು ಎ.ಟಿ.ಎಂ.ಗಳಿಂದ ಬರೋಬ್ಬರಿ 1.40 ಕೋಟಿ ರೂ. ಡ್ರಾ ಮಾಡಿರುವುದು ಗೊತ್ತಾಗಿದೆ. ಬಿಹಾರ ಮಾತ್ರವಲ್ಲದೇ, ಜಾರ್ಖಂಡ್, ಪಶ್ಚಿಮ ಬಂಗಾಳ, ನೇಪಾಳದಲ್ಲಿಯೂ ಈತ ಎ.ಟಿ.ಎಂ.ಗಳಿಂದ ಹಣ ದೋಚಿದ್ದಾನೆ.

2012 ರಿಂದ 2017 ರ ವರೆಗೆ ಎಷ್ಟು ಹಣ ದೋಚಿದ್ದೇನೆ ಎಂಬುದು ಗೊತ್ತಿಲ್ಲ. ಇದುವರೆಗೆ 55 ಮಂದಿಗೆ ತರಬೇತಿ ನೀಡಿದ್ದಾಗಿ ಸಾಹ್ನಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಈ ಖತರ್ನಾಕ್ ಚೋರನ ಕೃತ್ಯಕ್ಕೆ ದಂಗಾದ ಪೊಲೀಸರು, ತನಿಖೆಯನ್ನು ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...