alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಕುಟುಂಬದ ಐವರ ಕಗ್ಗೊಲೆ

ಜಾರ್ಖಂಡ್ ನ ವೆಸ್ಟ್ ಸಿಂಗ್ಬಮ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಲಾಗಿದೆ. ಬಾಲಕಿಯನ್ನು ವಿವಾಹಿತ ಪುರುಷನಿಗೆ ಮದುವೆ ಮಾಡಿಕೊಡಲು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಈ ನೀಚ ಕೃತ್ಯ ಎಸಗಲಾಗಿದೆ.

ಮಾರ್ಚ್ 14ರಂದೇ ಹತ್ಯೆ ನಡೆದಿದ್ದು, ಕಾಡಿನಲ್ಲಿ ಕೊಳೆತ ಶವಗಳು ಪತ್ತೆಯಾಗಿವೆ. ರಾಮ್ ಸಿಂಗ್, ಪತ್ನಿ ಪನು, ಮಗಳು ರಂಭಾ, ಮಗ ಕಂಡೆ ಹಾಗೂ ಸೋನ್ಯಾ ಕೊಲೆಯಾಗಿದ್ದಾರೆ. 9 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅಂತಾ ಹೇಳಲಾಗ್ತಿದೆ.

ಅವರಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ರಾಜ್ಯ ಬಿಟ್ಟು ಪರಾರಿಯಾಗಿದ್ದಾರೆ. ರಾಮ್ ಸಿಂಗ್ ತುಳಸೈ ಗ್ರಾಮದ ನಿವಾಸಿ. ಮನೆಯಿಂದ 3 ಕಿಮೀ ದೂರದಲ್ಲಿ ರಾಮ್ ಸಿಂಗ್ ಶವ ಸಿಕ್ಕಿದೆ. ಅಲ್ಲಿಂದ 5 ಕಿಮೀ ದೂರದ ಕಾಡಿನ ಮಧ್ಯೆ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿದೆ.

ಹಂತಕ, ರಾಮ್ ಸಿಂಗ್ ನ 17 ವರ್ಷದ ಮಗಳು ರಂಭಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ್ದ. ಆದ್ರೆ ಆತನಿಗೆ ಮೊದಲೇ ಮದುವೆ ಆಗಿತ್ತು. ಹಾಗಾಗಿ ಇದಕ್ಕೆ ರಾಮ್ ಸಿಂಗ್ ಒಪ್ಪಿರಲಿಲ್ಲ. ಇದರಿಂದ ಕೆರಳಿದ ಆತ ಮೊದಲು ರಾಮ್ ಸಿಂಗ್ ನ ಪತ್ನಿ ಮಕ್ಕಳನ್ನು ಕೊಂದಿದ್ದಾನೆ. ನಂತರ ರಾಮ್ ಸಿಂಗ್ ನನ್ನೂ ಹತ್ಯೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...