alex Certify
ಕನ್ನಡ ದುನಿಯಾ       Mobile App
       

Kannada Duniya

ಜಡೆ ಕತ್ತರಿಸುವ ಪ್ರಕರಣ: ಜನರ ಅಂಧವಿಶ್ವಾಸಕ್ಕೆ ಬೆಕ್ಕು ಬಲಿ

img-20170803-wa0001

ರಾತ್ರಿ ಬೆಳಗಾಗೋದ್ರೊಳಗೆ ಮಲಗಿದ್ದವರ ಜಡೆ ಕಟ್. ಸದ್ಯ ಬಹು ಚರ್ಚಿತ ವಿಷ್ಯ ಇದು. ದೆಹಲಿ, ಹರಿಯಾಣ, ರಾಜಸ್ಥಾನದ ನಂತ್ರ ಈಗ ಉತ್ತರ ಪ್ರದೇಶದಲ್ಲೂ ಈ ಸುದ್ದಿ ಹರಡುತ್ತಿದೆ. ಜನರ ಈ ಅಂಧವಿಶ್ವಾಸಕ್ಕೆ ಆಗ್ರಾದಲ್ಲಿ ಮಹಿಳೆಯೊಬ್ಬಳು ಬಲಿಯಾಗಿದ್ದರೆ ಮೇವಾತ್ ನಲ್ಲಿ ಬೆಕ್ಕೊಂದನ್ನು ಬಲಿ ಪಡೆದಿದ್ದಾರೆ ಜನರು.

ಮೇವಾತ್ ಜಿಲ್ಲೆಯ ನಾಗಿನ ಬ್ಲಾಕ್ ನ ಬುಕಾರಾ ಹಳ್ಳಿಯಲ್ಲಿ ಜನರು ಬೆಕ್ಕಿನ ಕತ್ತನ್ನು ಕತ್ತರಿಸಿ ಹಾಕಿದ್ದಾರೆ. ಜನರ ಗುಂಪಿನ ಮಧ್ಯೆಯಿದ್ದ ಬೆಕ್ಕನ್ನು ಹಿಡಿದು ಅದ್ರ ಕುತ್ತಿಗೆ ಕತ್ತರಿಸಿದ್ದಾರೆ. ಜಡೆ ಕತ್ತರಿಸಲ್ಪಟ್ಟಿದ್ದ ಮಹಿಳೆ ಬಳಿ ಈ ಬೆಕ್ಕು ಕುಳಿತಿದ್ದೇ ಇದಕ್ಕೆ ಕಾರಣವಾಗಿದೆ.

ಮಹಿಳೆಯೊಬ್ಬಳ ಜಡೆ ರಾತ್ರಿ ಕಟ್ ಆಗಿತ್ತು. ಮಹಿಳೆಯೊಬ್ಬಳು ಬಂದು ಜಡೆ ಕತ್ತರಿಸಿಕೊಂಡು ಹೋದ್ಲು. ಆಕೆ ಮುಖ ಬೆಕ್ಕಿನಂತಿತ್ತು ಎಂದು ಪೀಡಿತೆ ಹೇಳಿದ್ದಾಳೆ. ಅಷ್ಟೇ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಬೆಕ್ಕಿನ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ತಕ್ಷಣ ಆ ಬೆಕ್ಕನ್ನು ಎತ್ತಿಕೊಂಡ ಗುಂಪೊಂದು ಅದ್ರ ಕತ್ತು ಕತ್ತರಿಸಿ ಸಾಯಿಸಿದೆ.

ಇತ್ತ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ಬಾಲಕಿಯೊಬ್ಬಳ ಜಡೆ ಕಟ್ ಆಗಿದೆ. ಇದು ಭೂತ ಮಾಡಿದ್ದಲ್ಲ. ತಂತ್ರ-ಮಂತ್ರಕ್ಕೆ ಬಲಿಯಾದ ಬಾಲಕಿ ತಾನೇ ಕೂದಲು ಕಟ್ ಮಾಡಿಕೊಂಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ರೋಗ ದೂರ ಮಾಡಲು ಮಂತ್ರವಾದಿ ಹೇಳಿದ ಮಾತು ಕೇಳಿ ಬಾಲಕಿ ಕೂದಲು ಕಟ್ ಮಾಡಿಕೊಂಡಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...