alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಹತ್ಯೆ ಮಾಡಿದ್ದಾನೆ 91 ವರ್ಷದ ವೃದ್ದ

91 ವರ್ಷದ ವೃದ್ಧನೊಬ್ಬ 80 ವರ್ಷದ ತನ್ನ ಪತ್ನಿಯನ್ನು ಕೊಂದು ದೇಹವನ್ನ ಸುಟ್ಟುಹಾಕಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಕೇರಳದ ತ್ರಿಶೂರಿನಲ್ಲಿ ಈ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಚೆರಿಕುಟ್ಟಿ ಅಂತ ಗುರುತಿಸಲಾಗಿದ್ದು, ತಮ್ಮ ಪತ್ನಿ ತ್ರೆಸಿಯಾ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಪತ್ನಿಯನ್ನ ಪತಿ ರಸ್ತೆಯಲ್ಲೇ ಹಿಡಿದು ಥಳಿಸಿದ್ದರಂತೆ. ಆನಂತರದಲ್ಲಿ ತ್ರೆಸಿಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಅನುಮಾನಗೊಂಡ ಮಕ್ಕಳು ತಮ್ಮ ತಾಯಿ ಕಾಣೆಯಾಗಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ಆರಂಭಿಸಿದ ಪೊಲೀಸರು ಚೆರಿಕುಟ್ಟಿ ಅವರ ಮನೆಯ ಕಾಂಪೌಂಡ್ ನಲ್ಲಿ ಬೂದಿ ಮತ್ತು ಕೆಲ ಮೂಳೆಗಳನ್ನ ಪತ್ತೆಹಚ್ಚಿದರು. ಅದು ಚೆರಿಕುಟ್ಟಿಯವರ ಪತ್ನಿಯದ್ದಾಗಿರಬಹುದು ಅಂತ ಪೊಲೀಸರಿಗೂ ಅನುಮಾನವಿತ್ತು.

ಪೊಲೀಸರು ಕೂಡಲೇ ಚೆರಿಕುಟ್ಟಿಯವರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಂದು ಮೃತ ದೇಹವನ್ನು ಸುಟ್ಟು ಹಾಕಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಈಗಾಗ್ಲೇ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೆರಿಕುಟ್ಟಿಯವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...