alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರ ಹತ್ಯೆಗೆ ಕಾರಣವಾಯ್ತು ಏರ್ ಕಂಡೀಷನರ್

Air conditionerಮನೆಯಲ್ಲಿ ಏರ್ ಕಂಡೀಷನರ್ ಹಾಕುವುದು ಬೇಡವೆಂದು ಹೇಳಿದರೂ ಅದನ್ನು ನಿರ್ಲಕ್ಷಿಸಿದರೆಂಬ ಕಾರಣಕ್ಕೆ ರೊಚ್ಚಿಗೆದ್ದ 81 ವರ್ಷದ ವೃದ್ದನೊಬ್ಬ ಪತ್ನಿ ಹಾಗೂ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯಲ್ಲಿ ಈ ಘಟನೆ ನಡೆದಿದ್ದು, ರೈಲ್ವೇ ಇಲಾಖೆಯ ನಿವೃತ್ತ ನೌಕರ ಪೌಲ್, ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತದೆಂಬ ಕಾರಣಕ್ಕೆ ಎಸಿ ಆನ್ ಮಾಡುವುದು ಬೇಡವೆಂದು ಹೇಳಿದ್ದಾನೆ.

ಆದರೆ ತಡೆಯಲಾರದ ಸೆಕೆಯಿಂದ ಆತನ ಪತ್ನಿ ಮೇರಿ ಮತ್ತು ಮಗ ಥಾಮಸ್ ಪೌಲ್ ನ ಮಾತನ್ನು ನಿರ್ಲಕ್ಷಿಸಿ ಎಸಿ ಆನ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ವೃದ್ದ ಕೈಗೆ ಸಿಕ್ಕ ಕುಡುಗೋಲಿನಿಂದ ಇಬ್ಬರನ್ನೂ ಹತ್ಯೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಪೌಲ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...