alex Certify
ಕನ್ನಡ ದುನಿಯಾ       Mobile App
       

Kannada Duniya

ಆಟದ ಹೆಸರಲ್ಲಿ ಬಾಲಕಿ ಮೇಲೆರಗಿದ ಅಪ್ರಾಪ್ತರು

images-1

ಮಕ್ಕಳನ್ನು ಆಟವಾಡಲು ಬಿಡುವುದೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸ್ತಾನದಲ್ಲಿ ಆಟವಾಡ್ತಾ 8 ವರ್ಷದ ಬಾಲಕಿ ಮೇಲೆ 13 ವರ್ಷದ ಅಪ್ರಾಪ್ತರಿಬ್ಬರು  ಅತ್ಯಾಚಾರವೆಸಗಿದ್ದಾರೆ. ರಾಜಸ್ತಾನದ ಭಿಲ್ವಾರ್ ನಲ್ಲಿ ನಡೆದ ಘಟನೆ ಎಲ್ಲರನ್ನು ದಂಗುಬಡಿಸಿದೆ.

ಸುಭಾಷ್ ನಗರ ಠಾಣಾ ವ್ಯಾಪ್ತಿಯಲ್ಲಿ 8 ವರ್ಷದ ಬಾಲಕಿಯೊಬ್ಬಳು ಆಟವಾಡ್ತಿದ್ದಳು. ಅಲ್ಲಿಗೆ ಬಂದ 13 ಹಾಗೂ 14 ವರ್ಷದ ಅಪ್ರಾಪ್ತ ಬಾಲಕರಿಬ್ಬರು ಆಕೆಯ ಜೊತೆ ಆಟವಾಡ್ತಾ ಆಟವಾಡ್ತಾ ತೋಟಕ್ಕೆ ಕರೆದೊಯ್ದಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪ್ರಾಪ್ತರು ಮನೆಯಲ್ಲಿ ಹೇಳದಂತೆ ಬೆದರಿಸಿದ್ದಾರೆ.

ಮನೆಗೆ ಬಂದ ಬಾಲಕಿ ಪಾಲಕರ ಮುಂದೆ ಎಲ್ಲ ವಿಷ್ಯ ಹೇಳಿದ್ದಾಳೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ ಕುಟುಂಬಸ್ಥರು. ಘಟನೆ ನಡೆದು ಎರಡು ದಿನವಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಕುಟುಂಬಸ್ಥರ ಆರೋಪ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...