alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರು-ರೌಡಿಗಳ ನಡುವಿನ ಕಾಳಗಕ್ಕೆ ಬಾಲಕ ಬಲಿ

ಉತ್ತರ ಪ್ರದೇಶದ ಮಥುರಾದಲ್ಲಿ ಪೊಲೀಸರು ಮತ್ತು ಕ್ರಿಮಿನಲ್ ಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 8 ವರ್ಷದ ಬಾಲಕ ಬಲಿಯಾಗಿದ್ದಾನೆ. ಮಾಧವ್ ಭಾರದ್ವಾಜ್ ಎಂಬ ಬಾಲಕ ಮನೆಯ ಬಳಿಯೇ ಆಟವಾಡುತ್ತಿದ್ದ. ಪಿಸ್ತೂಲ್ ನಿಂದ ಸಿಡಿದ ಗುಂಡು ಬಾಲಕನ ಎದೆಯನ್ನು ಹೊಕ್ಕಿದೆ.

ಆದ್ರೆ ಗುಂಡು ಹಾರಿಸಿದ್ದು ಪೊಲೀಸರಾ? ಅಥವಾ ಕ್ರಿಮಿನಲ್ ಗಳಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮೋಹನ್ ಪುರ ಎಂಬ ಗ್ರಾಮದಲ್ಲಿ ರೌಡಿಗಳು ಅಡಗಿಕೊಂಡಿರುವ ಮಾಹಿತಿ ಪಡೆದ ಪೊಲೀಸರು ಅವರನ್ನು ಹಿಡಿಯಲು ಬಂದಿದ್ರು. ಸರೆಂಡರ್ ಆಗುವಂತೆ ಸೂಚಿಸಿದ್ದಾರೆ.

ಆದ್ರೆ ರೌಡಿಗಳು ಏಕಾಏಕಿ ಗುಂಡು ಹಾರಿಸಲು ಶುರು ಮಾಡಿದ್ದಾರೆ. ಪೊಲೀಸರು ಕೂಡ ಪ್ರತಿದಾಳಿ ಆರಂಭಿಸಿದ್ದಾರೆ. ಈ ಎನ್ಕೌಂಟರ್ ನಲ್ಲಿ ಅಮಾಯಕ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಬಾಲಕನ ಕುಟುಂಬಕ್ಕೆ ಯುಪಿ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...